ಬೆಂಗಳೂರು: ದಲಿತ ಸಮಾವೇಶ ಮಾಡಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್ ಒಪ್ಪಿದರೆ ದಲಿತ ಸಮಾವೇಶ ಮಾಡಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿರುವ ದಲಿತ ಸಮಾವೇಶದ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ಮುನಿಯಪ್ಪ ಅವರು, ಸಮಾವೇಶ ಮಾಡಬೇಡಿ ಎಂದು ಹೈಕಮಾಂಡ್ ಏನೂ ಹೇಳಿಲ್ಲ. ಸಮಾವೇಶ ಮಾಡಬೇಕು ಎಂದು ರಾಜಣ್ಣ, ಪರಮೇಶ್ವರ್ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ. ಈ ಹಿಂದೆ ಚಿತ್ರದುರ್ಗದಲ್ಲಿ ಮಾಡಿದ್ದ ಎಸ್ಸಿ, ಎಸ್ಟಿ ಸಮಾವೇಶ ಯಶಸ್ವಿಯಾಗಿತ್ತು. ಆದ್ದರಿಂದ ನಮಗೆ ಹೆಚ್ಚು ಲಾಭ ಆಗಿತ್ತು. ಚಿತ್ರದುರ್ಗದಲ್ಲಿ ಸಮಾವೇಶ ಮಾಡಬೇಕು ಎಂದು ಹೈಕಮಾಂಡ್ ನಾಯಕರೇ ಹೇಳಿದ್ದರು. ಸಮಾವೇಶ ಮಾಡಿ ಅದು ನಮಗೆ ಯಶಸ್ವಿಯಾಗಿತ್ತು. ಹೀಗಾಗಿ ಅಭಿನಂದನೆ ಹೆಸರಿನಲ್ಲಿ ಸಮಾವೇಶ ಮಾಡಬೇಕು ಎಂದು ತಿಳಿಸಿದರು.





