ಬೆಂಗಳೂರು: ರಾಜ್ಯಪಾಲರು ದ್ವೇಷಭಾಷಣ ಬಿಲ್ ಸ್ವೀಕಾರವೂ ಮಾಡಿಲ್ಲ. ತಿರಸ್ಕಾರವೂ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಿಲ್ ಅನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ತಿರಸ್ಕಾರ ಮಾಡಿಲ್ಲ. ಮಸೂದೆಯನ್ನು ಸ್ವೀಕಾರವೂ ಮಾಡಿಲ್ಲ, ತಿರಸ್ಕಾರವೂ ಕೂಡ ಮಾಡಿಲ್ಲ. ಬಿಲ್ ರಿಜೆಕ್ಟ್ ಮಾಡಿದ ಮೇಲೆ ಏನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಆಮೇಲೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಸರ್ಕಾರದಿಂದ 22 ರಿಂದ 25 ಬಿಲ್‌ಗಳನ್ನು ರಾಜ್ಯಪಾಲರಿಗೆ ಕಳಿಸಿದ್ದವು. ಬಹಳಷ್ಟು ಬಿಲ್‌ಗಳಿಗೆ ಸಹಿ ಮಾಡಿ ಕಳುಹಿಸಿದ್ದಾರೆ. ಕೆಲವು ಬಿಲ್‌ಗಳು ಮಾತ್ರ ಇನ್ನೂ ರಾಜ್ಯಪಾಲರ ಬಳಿಯೇ ಇದೆ. ಒಳಮೀಸಲಾತಿ ವಿಚಾರವಾಗಿ ಅವರು ಸ್ಪಷ್ಟನೆ ಕೇಳಿದ್ದಾರೆ. ಅವರು ಕೂಡ ಈ ಬಿಲ್ ಓದಿದ ಬಳಿಕ ಒಪ್ಪಿಗೆ ಕೊಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.





