ಬಳ್ಳಾರಿ: ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣ ಕುರಿತು ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಅವರು, ಸಾಕ್ಷಿ ಸಿಗಬಾರದೆಂದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ದೇಹ ಸುಟ್ಟು ಹಾಕಿದ್ದಾರೆ. ರಾಜಶೇಖರ್ ದೇಹದಲ್ಲಿ ಬಹಳಷ್ಟು ಗುಂಡುಗಳಿದ್ದವು ಎಂಬ ಮಾಹಿತಿ ಇತ್ತು. ಆದರೆ ಸಾಕ್ಷಿ ಸಿಗಬಾರದೆಂದು ದೇಹ ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಶೇಖರ್ ತಂದೆ ಮೃತಪಟ್ಟಾಗ ಮಣ್ಣಲ್ಲಿ ಹೂತಿದ್ದರು. ರಾಜಶೇಖರ್ ಅವರನ್ನೂ ಹೂಳಲು ಗುಂಡಿ ತೆಗೆದಿದ್ದರು. ಆದರೆ ಬಳಿಕ ಅದನ್ನು ಮುಚ್ಚಿದ್ದಾರೆ. ರಾಜಶೇಖರ್ ಕುಟುಂಬವನ್ನು ಹೆದರಿಸಿ ಬೆದರಿಸಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ಕಿಡಿಕಾರಿದರು.




