ರಾಮನಗರ: ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಕೂತುಹಲ ಮೂಡಿಸಿರುವ ಕ್ಷೇತ್ರಗಳೆಂದರೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಎನ್ನಬಹುದು. ಎರಡು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಇತ್ತ ಬೆಂಗಳೂರು ಲೋಕಸಭಾ ಕ್ಷೇತ್ರದ ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ನಿಖಿಲ್ ಕುಮಾರಸ್ವಾಮಿ 2019ರ ಲೋಕಸಭೆ ಚುನಾವಣೆಯಲ್ಲಿ ನಡೆದ ಕೆಲವು ಘಟನೆಗಳನ್ನು ನೆನೆಸಿಕೊಂಡು ವೇದಿಕೆಯಲ್ಲಿಯೇ ಗಳಗಳನೆ ಅತ್ತ ಘಟನೆ ನಡೆಯಿತು.
2019 ರಲ್ಲಿ ನನಗೆ ರಾಜಕಾರಣದ ಅನುಭವದ ಕೊರತೆ ಇತ್ತು, ಆವತ್ತಿನ ಕಾಂಗ್ರೆಸ್ ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾದೆ, ಅದು ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ನಾನು ಎರಡು ಬಾರಿ ಸೋತಿದ್ದೇನೆ, ನನ್ನ ಮಾವ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರನ್ನು ಸೋಲಿಸಬೇಡಿ, ರಾಮನಗರದ ಜನ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಪರಿಪರಿಯಾಗಿ ಬೇಡಿದರು.





