Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮುಡಾ ಹಗರಣದಲ್ಲಿ ರಾಜಕೀಯ ಪಕ್ಷಗಳ ನಾಯಕರೂ ಕೂಡ ಶಾಮೀಲಾಗಿದ್ದಾರೆ ; ತನ್ವೀರ್ ಹೊಸ ಬಾಂಬ್‌

ಬೆಂಗಳೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮದಲ್ಲಿ ರಾಜಕೀಯ ಪಕ್ಷಗಳ ನಾಯಕರೂ ಕೂಡ ಶಾಮೀಲಾಗಿದ್ದಾರೆ. ಆದರೆ ಅವರ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ತನ್ವೀರ್‌ ಸೇಠ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮುಡಾ ಅಕ್ರಮ ವಿಚಾರಕ್ಕೆ ಮಾತನಾಡಿದ ಅವರು, ಮುಡಾ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ನಾನು ಪ್ರಾಧಿಕಾರದ ಸದಸ್ಯನಾಗಿದ್ದು, ತನಿಖೆ ನಡೆಯುತ್ತಿರುವಾಗ ಆರೋಪದ ಬಗ್ಗೆ ನಾನು ಈಗ ಪ್ರತಿಕ್ರಿಯೆ ಕೊಡಲು ಆಗಲ್ಲ. ನಿರಂತರ ೧೫ ವರ್ಷದಿಂದ ಪ್ರಾಧಿಕಾರದ ಸದಸ್ಯನಾಗಿದ್ದೇನೆ. ಮುಡಾದಲ್ಲಿ ಅಧಿಕಾರಿಗಳು ಅಧಿಕಾರ ಮೀರಿ ಏನಾದ್ರೂ ಮಾಡಿದ್ದರೆ  ಕ್ರಮಕೈಗೊಳ್ಳಲಾಗುತ್ತದೆ  ಎಂದು ಹೇಳಿದರು.

ಅಲ್ಲದೆ ಪ್ರಾಧಿಕಾರದ ಸದಸ್ಯರಾಗಲು ಪರಿಷತ್‌, ವಿಧಾನಸಭೆ ಸದಸ್ಯತ್ವ ಇರಬೇಕು. ಇದನ್ನ ಸರ್ಕಾರ ಸರಿಪಡಿಸುವ ಕೆಲಸ ಮಾಡಬೇಕು. ಬಿಜೆಪಿ, ಜೆಡಿಎಸ್‌ ಕಾಂಗ್ರೆಸ್‌ ಮುಖಂಡೆ ಹೆಸರು ಕೇಳಿ ಬರುತ್ತಿದೆ. ಮುಡಾ ನಿವೇಶನ ಹಂಚಿಕೆ ವಿಚಾರವಾಗಿ ಜಿಟಿ ದೇವೇಗೌಡ, ಸಾರಾ ಮಹೇಶ್‌, ಎಸ್‌ ಟಿ ಸೋಮಶೇಕರ್‌ ಹೆಸರು ಕೇಳಿ ಬರುತ್ತಿದೆ. ಎಲ್ಲರ ಹೆಸರು ಕೇಳಿ ಬರುತ್ತಿರುವುದರಿಂದ ಯಾರು ಇದ್ದಾರೆ ಯಾರು ಇಲ್ಲ ಎಂಬುವುದನ್ನ ನಾನು ಹೇಳಲು ಸಾಧ್ಯವಿಲ್ಲ ಎಂದರು.

 

 

Tags: