Mysore
20
overcast clouds
Light
Dark

KSRTC –BMTC ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ೧೦ ಲಕ್ಷ –ನೌಕರರಿಗೆ ೧ ಕೋಟಿ ಪರಿಹಾರ

ಬೆಂಗಳೂರು : ಬಿಎಂಟಿಸಿ , ಕೆಎಸ್‌ ಆರ್‌ ಟಿಸಿ ಬಸ್‌ ಚಾಲಕರ ಎಡವಟ್ಟಿನಿಂದ ಕೆಲವೊಮ್ಮೆ ಆಕ್ಸಿಡೆಂಟ್‌ ಗಳಾಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ಅಮಾಯಕ ಜೀವಗಳು ಆಕ್ಸಿಡೆಂಟ್‌ ನಲ್ಲಿ ಸಾವನ್ನಪ್ಪಿದರೆ ಕುಟುಂಬಸ್ಥರು ಪರಿಹಾರ ಪಡೆಯಲು ಕೋರ್ಟ್‌ ಕಚೇರಿ ಅಂತ ವರ್ಷಗಟ್ಟಲೇ ಅಲೆದಾಡಬೇಕಿತ್ತು. ಇದೀಗ ಸಾರಿಗೆ ಸಚಿವರು ಕೋರ್ಟ್‌ ಕಚೇರಿಗೆ ಅಲೆದಾಡುವುದನ್ನ ತಪ್ಪಿಸಲು ಮುಂದಾಗಿದ್ದಾರೆ.

ಕೆ.ಎಸ್‌ ಆರ್‌ ಟಿಸಿ ಬಿಎಂಟಿಸಿ ಬಸ್‌ ಆಕ್ಸಿಡೆಂಟ್‌ ನಿಂದ ಸಾವನ್ನಪ್ಪಿದವರಿಗೆ ಇನ್ನು ಮುಂದೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇತ್ತ ಕೆಎಸ್‌ ಆರ್‌ ಟಿಸಿ, ಬಿಎಂಟಿಸಿ ಡ್ರೈವರ್‌ ಕಂಡಕ್ಟರ್ ಗಳು ಆಕ್ಸಿಡೆಂಟ್‌ ನಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೂ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ.

ಈ ಹಿಂದೆ ಕೆ.ಎಸ್‌ ಆರ್‌ ಟಿಸಿ, ಬಿಎಂಟಿಸಿ ಬಸ್‌ ಆಕ್ಸಿಡೆಂಟ್‌ ನಿಂದ ಸಾವನ್ನಪ್ಪಿದ ವಾಹನ ಸವಾರರು, ಪಾದಚಾರಿಗಳಿಗೆ ಕೇವಲ ೨೫ ಸಾವಿರ ರೂಪಾಯಿ ಪರಿಹಾರ ನೀಡಲಾಗ್ತಿತ್ತು. ಇಂದಿನಿಂದ ಹತ್ತು ಲಕ್ಷ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಕೆ.ಎಸ್‌ ಆರ್‌ ಟಿಸಿ, ಬಿಎಂಟಿಸಿ ಬಸದ ಅವಘಡ, ಬಸ್‌ ಆಕ್ಸಿಡೆಂಟ್‌ ನಿಂದ ಮೃತಪಡುವ ಪ್ರಯಾಣಿಕರಿಗೂ ೧೦ ಲಕ್ಷ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ಈ ಹಿಂದೆ ಕೆಎಸ್‌ ಆರ್‌ ಟಿಸಿ, ಬಿಎಂಟಿಸಿ  ಡ್ರೈವರ್‌ ,ಕಂಡಕ್ಟರ್ ಗಳು ಆಕ್ಸಿಡೆಂಟ್‌ ಆಗಿ ತೀರಿಕೊಂಡರೆ ಕೇವಲ ೩ ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಈಗ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.