ಬೆಂಗಳೂರು: ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಪತ್ನಿ ಕಿರಕುಳಕ್ಕೆ ಬೇಸತ್ತು ಅತುಲ್ ಸುಭಾಷ್(34) ಎಂಬುವವರು ಡೆತ್‌ನೋಟ್ ಬರೆದಿಟ್ಟು ಬೆಂಗಳೂರಿನ ಮಂಜುನಾಥ ಲೇಔಟ್‌ನ ಪ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ಎ1 ಆರೋಪಿ ನಿಖಿತಾ ಸಿಂಘಾನಿಯಾಳನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಅತ್ತೆ ಎ2 ನಿಶಾ ಸಿಂಘಾನಿಯಾ ಹಾಗೂ ಬಾಮೈದ ಎ3 ಅನುರಾಗ್ ಅವರನ್ನು ನಿನ್ನೆ ತಡರಾತ್ರಿ ಆರೆಸ್ಟ್ ಮಾಡುವಲ್ಲಿ ಯಶ್ವಸಿಯಾಗಿ ಬೆಂಗಳೂರಿಗೆ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅತುಲ್ ಸುಭಾಷ್ 15 ದಿನಗಳಿಂದ ಆತ್ಮಹತ್ಯೆಗೆ ಯೋಜಿಸಿದ್ದರು ಹಾಗೂ ಡೆತ್‌ನೋಟ್ ಬರೆದಿದ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಪತ್ನಿ ಹಾಗೂ ಸಂಬಂಧಿಕರಿಂದ ಕಿರಕುಳಕ್ಕೆ ಒಳಗಾಗಿದ್ದ ಅತುಲ್ ಅವರು ತಮ್ಮ ಆತ್ಮಹತ್ಯೆಗೆ ಮುನ್ನ 90 ನಿಮಿಷಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಆತ್ಮಹತ್ಯೆಗೂ ಮುನ್ನ ಮೂರು ದಿನದ ಹಿಂದೆ ಡೆತ್ನೋಟ್ ಬರೆದಿಟ್ಟಿದ್ದರು. ಜೊತೆಗೆ ಕಾನೂನಿನ ವಿಚಾರಗಳ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು ಎಂದು ಪೊಲೀಸ್ ತನಿಖಾ ವರದಿಯಲ್ಲಿ ತಿಳಿದು ಬಂದಿದೆ.