Mysore
21
broken clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಮದ್ವೆ ಡೇಟ್ ಬದಲಾವಣೆ ಮಾಡಬೇಡ ಅಂದಿದ್ದಾರೆ ; ದರ್ಶನ್ ಭೇಟಿ ಬಳಿಕ ತರುಣ್ ರಿಯಾಕ್ಷನ್‌

ಬೆಂಗಳೂರು : ನನ್ನ ಸಲುವಾಗಿ ಮದ್ವೆ ಡೇಟ್‌ ಬದಲಾವಣೆ  ಮಾಡೋದು ಬೇಡ  ಅಂತ ದರ್ಶನ್‌ ಹೇಳಿದ್ದಾರೆ ಎಂದು ನಿರ್ದೇಶಕ ತರುಣ್‌ ಸುಧೀರ್‌ ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ದೇಶಕ ತರುಣ್‌ ಸುಧೀರ್‌, ಅವರೇನು ತಪ್ಪು ಮಾಡಿಲ್ಲ, ನ್ಯಾಯ ಸಯತ್ತದೆ ಎಂಬ ನಂಬಿಕೆ ಇದೆ. ದರ್ಶನ್‌ ಅವರಿಗಿಂತ ನಾವೇ ವೀಕ್‌ ಆಗಿದ್ದೇವೆ. ಅವರಿಗೆ ಜ್ವರ ಇತ್ತು ರಿಕವರಿ ಆಗಿದ್ದಾರೆ. ನನ್ನ ಮತ್ತು ಸೋನಲ್‌ ವಿಚಾರ ಅವರಿಗೆ ಮೊದಲೆ ತಿಳಿದಿತ್ತು. ದರ್ಶನ್‌ ಅವರೇ ನಮ್ಮ ಮದುವೆ ಡೇಟ್‌ ಫಿಕ್ಸ್‌ ಮಾಡಿದ್ದು. ಅವರೇನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ. ನಮ್ಮನ್ನು ಹೆಚ್ಚಾಗಿ ಪ್ರೀತಿಸುವವರ ಮೇಲೆಯೇ ನಮಗೆ ನಂಬಿಕೆ ಹೆಚ್ಚಾಗಿರುತ್ತದೆ ಎಂದರು.

ಅಲ್ಲದೆ ನಮ್ಮ ಮದುವೆ ದಿನಾಂಕದ ಮುಂಚೆಯೇ ಅವರು ಹೊರಗೆ ಬರುತ್ತಾರೆ ಎನ್ನುವ ಭರವಸೆಯಿದೆ. ಅವರಿಗೆ ಮದುವೆ ಪತ್ರಿಕೆ ಏನು ಕೊಟ್ಟಿಲ್ಲ. ಅದಕ್ಕೆ ಜೈಲಿನಲ್ಲಿ ಅನುಮತಿ ಇಲ್ಲ. ಈಗ ದರ್ಶನ್‌ ಅವರ ಆಶೀರ್ವಾದ ಪಡೆದುಬಂದಿದ್ದೇನೆ ಎಂದು ಹೇಳಿದರು.

Tags:
error: Content is protected !!