ಮೈಸೂರು : ಮೈಸೂರಿನ ಸುತ್ತೂರು ಜಾತ್ರೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ದಾರೆ. ಅಮಿತ್ ಶಾ ರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕ್ಲಸ್ಟರ್ ನಾಯಕರ ಲೈನ್ಅಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ ನಡುವೆ ಇರುಸು ಮುರುಸು ಉಂಟಾಗಿದ್ದು, ವಾಕ್‌ಸಮರಕ್ಕೆ ಕಾರಣವಾಗಿದೆ.
ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ಉಸ್ತುವಾರಿಯನ್ನು ಮಾಜಿ ಶಾಸಕ ಪ್ರೀತಮ್ ಗೌಡ ಹೊತ್ತುಕೊಂಡಿದ್ದರು. ಆದರೆ, ಪ್ರತಾಪ್ ಸಿಂಹ ಮತ್ತಿತರರನ್ನು ಕಡೆಗಣಿಸಲಾಗಿದೆ. ತಮ್ಮನ್ನು ಸೇರಿದಂತೆ ಮೈಸೂರು ಕ್ಲಸ್ಟರ್ನ ಪ್ರಮುಖ ನಾಯಕರನ್ನು ಪಟ್ಟಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರತಾಪ್ ಸಿಂಹ ಅವರು ಪ್ರೀತಮ್ ಗೌಡರನ್ನು ಸಂಸದ ಪ್ರತಾಪ್ ಸಿಂಹ ತೀಕ್ಷ್ಣವಾಗಿಯೆ ಪ್ರಶ್ನೆ ಮಾಡಿದ್ದರು.
ಪ್ರತಾಪಸಿಂಹ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಅನ್ನೋ ರೀತಿಯಲ್ಲಿ ಪ್ರೀತಮ್ ಗೌಡ ಅವರು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಸಮಾಧಾನ ಮಾಡಿದ ಘಟನೆ ನಡೆದಿದೆ.