ಕೊಡಗು/ಭಾಗಮಂಡಲ: ಜನವರಿ ೨೨ ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿದೆ. ಹಾಗೂ ಅದೇ ದಿನ ರಾಮಲಲ್ಲಾ(ಬಾಲರಾಮ) ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡಯಲಿದ್ದು, ರಾಮ ಮಂದಿರಕ್ಕೆ ದೇಶದ ವಿವಿಧ ಪವಿತ್ರ ನದಿಗಳ ನೀರನ್ನು ರವಾನೆ ಮಾಡಲಾಗುತ್ತಿದೆ.
ಅದರಂತೆಯೇ ದಕ್ಷಿಣ ಭಾರತದ ಪವಿತ್ರ ನದಿ ಕಾವೇರಿಯ ತೀರ್ಥ ರವಾನೆ ಮಾಡಲಾಗಿದೆ.
ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮ ಕುಡಿಕೆಯಿಂದ ಅಖಿಲ ಭಾರತೀಯ ಸಂತ ಸಮಿತಿ, ವಿಶ್ವ ಹಿಂದೂ ಪರಿಷತ್ ಸದಸ್ಯರೆಲ್ಲರೂ ಸೇರಿ ಕಾವೇರಿ ತೀರ್ಥ ಸಂಗ್ರಹ ಮಾಡಿದ್ದಾರೆ. ಇದೇ ವೇಳೆ ಕಾವೇರಿಇ ಮಾತೆಯ ನಾಮ ಜಪ ಮಾಡಲಾಯಿತು.





