Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಪಕ್ಷ ವಿರೋಧಿ ಚಟುವಟಿಕೆ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಿ: ಮಾಜಿ ಸಚಿವ ಕಟ್ಟಾ ಸುಬ್ರಹ್ಯಣ್ಯ

ಬೆಂಗಳೂರು: ಪಕ್ಷದ ವಿರೋಧ ಚಟುವಟಿಕೆ ಮಾಡುವವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಎಷ್ಟು ಪಾರ್ಟಿ ಬದಲಾವಣೆ ಮಾಡಿಕೊಂಡು ಬಂದರು ಇವತ್ತು ಮಾತಾಡುತ್ತಾರೆ. ಬಿಜೆಪಿ ಬಗ್ಗೆ ನಿಯತ್ತು ಇಲ್ಲದೆ ಜೆಡಿಎಸ್‍ಗೆ ಹೋಗಿದ್ದರು ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಭಿನ್ನಮತೀಯ ನಾಯಕರ ವಿರುದ್ಧ  ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ಕಿಡಿಕಾರಿದರು.

 

ತಮ್ಮ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಅವರು,  ಯಡಿಯೂರಪ್ಪ ಅವರನ್ನ ಇಳಿಸಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿದಾಗ ಬಿಜೆಪಿ ಪಕ್ಷ ನಡೆಸಲು ಆಗಲಿಲ್ಲ. ಪಕ್ಷ ಶಕ್ತಿ ಕಳೆದುಕೊಂಡಿತ್ತು. ಮತ್ತೆ ಯಡಿಯೂರಪ್ಪ ಬಂದರು ಅಧಿಕಾರಕ್ಕೆ ಮತ್ತೆ ಪಕ್ಷ ಬಂತು. ಯಡಿಯೂರಪ್ಪ ಇನ್ನು ಶಕ್ತಿ ಉಳಿಸಿಕೊಂಡಿದ್ದಾರೆ ಎಂದರು.

ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಎಲ್ಲರನ್ನು ಪದಾಧಿಕಾರಿಗಳು ಮಾಡಲು ಸಾಧ್ಯವಿಲ್ಲ. ಪಾರ್ಟಿ ನಿಯಮಾನುಸಾರ ಯಾರನ್ನು ಮಾಡಲು ಸಾಧ್ಯವೋ ಮಾಡುತ್ತಾರೆ. ಕಾಂಗ್ರೆಸ್ ರೀತಿ ದೊಡ್ಡದಾಗಿ ಪದಾಧಿಕಾರಿಗಳು ಮಾಡಲು ಆಗೊಲ್ಲ. ಕೇಂದ್ರದ ಸೂಚನೆ ಪ್ರಕಾರ ಮಾಡಿz?ದÉ?ವೆ ಎಂದರು.

ಶಕ್ತಿ ಇರುವರು ಎಲ್ಲಿz?ದÉ?ನು? ಅವರನ್ನ ಮಾಡಿದರು, ಇವರನ್ನು ಮಾಡಿದರು ಎಂದರೆ ಹೇಗೆ? ಸಮಯ ಅನುಕೂಲ, ಸಂಧರ್ಭದಲ್ಲಿ ಪದಾಧಿಕಾರಿಗಳನ್ನು ಮಾಡುತ್ತಾರೆ. ನಾವು ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಟಿಕೆಟ್ ಸಿಕ್ಕಿಲ್ಲ. ಆದರೆ ಪಕ್ಷ ಹೇಳಿತು ನಾವು ಪಕ್ಷದ ಕೆಲಸ ಮಾಡಿz?ದÉ?ವೆ. ಇದು ಪಕ್ಷ ನಿಷ್ಠೆ ಎಂದು ಸಮರ್ಥಿಸಿಕೊಂಡರು. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Tags: