ಬೆಂಗಳೂರು: ರಾಜ್ಯದ ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬರಲು ಇಂದು ಶಸ್ತ್ರಸ್ತ್ರ ತ್ಯಜಿಸಿ ಶರಣಾಗುತ್ತಿದ್ದಾರೆ. ಇದಕ್ಕಾಗಿ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆಯು ಕಾರ್ಯಕ್ರಮ ಏರ್ಪಡಿಸಿ ಕಾದಿತ್ತು. ಇದೀಗ ಈ ಕಾರ್ಯಕ್ರಮ ದಿಢೀರ್ ಬೆಂಗಳೂರಿಗೆ ವರ್ಗಾವಣೆಗೊಂಡಿದೆ.
ಶೃಂಗೇರಿಯಿಂದ ಚಿಕ್ಕಮಗಳೂರು ಕಡೆಗೆ ಶರಣಾಗತಿಯ ಆರು ನಕ್ಸಲರು ಬರುತ್ತಿದ್ದರು. ಈ ವೇಳೆ ಸಿಎಂ ಸೂಚನೆ ಮೇರೆಗೆ ಎಲ್ಲರನ್ನೂ ಪೊಲೀಸರು ಬೆಂಗಳೂರಿಗೆ ಕರೆದೊಯ್ದರು.
ತಮ್ಮ ಸಮ್ಮುಖದಲ್ಲೇ ನಕ್ಸಲರು ಮುಖ್ಯವಾಹಿನಿಗೆ ಬರಲಿ ಸಿಎಂ ಸಿದ್ದರಾಮಯ್ಯ ಅವರು ಬಯಸಿದ್ದಾರೆ. ಹೀಗಾಗಿ ಬೆಂಗಳೂರಿಗೆ ಕಾರ್ಯಕ್ರಮ ಸ್ಥಳಾಂತರ ಆಗಿದೆ ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಅಶೋಕ್ ಹೇಳಿದರು.
ನಕ್ಸಲರ ಕುಟುಂಬ ಸದಸ್ಯರನ್ನೂ ಬೆಂಗಳೂರಿಗೆ ಪೊಲೀಸ್ ವಾಹನಗಳಲ್ಲೇ ಕರೆದೊಯ್ಯಲಾಯಿತು.