Mysore
21
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

8 ದಿನ ಸಿಐಡಿ ಕಸ್ಟಡಿಗೆ ಸೂರಜ್‌ ರೇವಣ್ಣ

ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿರುವ ಜೆಡಿಎಸ್​ MLC ಸೂರಜ್​ ರೇವಣ್ಣಗೆ 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಕೇಸ್‌ ಅನ್ನು ಸಿಐಡಿಗೆ ವಹಿಸಿ ಆದೇಶ ಮಾಡಿತ್ತು. ಆದರೆ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿರಲಿಲ್ಲ. ಭಾನುವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು.

ಇಂದು ಸೂರಜ್‌ ರೇವಣ್ಣರನ್ನ ಪೊಲೀಸರು ಕೋರ್ಟ್‌ ಗೆ ಹಾಜರು ಪಡಿಸಿ 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಧೀಶರಾದ ಶಿವಕುಮಾರ್‌ ಅವರು 8 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ಅಲ್ಲದೆ ಜುಲೈ 1 ಸಂಜೆ 4 ಗಂಟೆಗೆ ಸೂರಜ್‌ ರೇವಣ್ಣರನ್ನ  ಕೋರ್ಟ್‌ಗೆ ಹಾಜರುಪಡಿಸುವಂತೆ ಸಿಐಡಿ ಪೊಲೀಸರಿಗೆ ಸೂಚನೆ ನೀಡಿದರು.

ಇನ್ನು ಪ್ರಕರಣದ ತನಿಖಾಧಿಕಾರಿಗಳಾಗಿ ಸಿಐಡಿ ಎಸ್​ಪಿ ವೆಂಕಟೇಶ್, ಡಿವೈಎಸ್​ಪಿ ಉಮೇಶ್, ಇನ್ಸ್​ಪೆಕ್ಟರ್ ನರೇಂದ್ರ ಬಾಬು ನೇಮಕಗೊಂಡಿದ್ದಾರೆ.

Tags:
error: Content is protected !!