ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ನಟಿ ಸುಮಲತಾ ಅಂಬರೀಷ್ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಈ ರೀತಿ ಕನ್ನಡಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಹೇಳಿಕೆಗಳನ್ನು ಕೊಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಕನ್ನಡಕ್ಕೆ ಅಪಮಾನವಾದರೆ ಯಾರೂ ಕೂಡ ಸಹಿಸಲ್ಲ. ಕ್ಷಮೆ ಕೇಳುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
ಇನ್ನು ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿದೆ ಎಂದು ಹೇಳಲು ಆಗಲ್ಲ. ಯಾರೊಬ್ಬರ ಹೇಳಿಕೆಯಿಂದ ಕನ್ನಡದ ಘನತೆ ಕಡಿಮೆ ಆಗಲ್ಲ. ಕನ್ನಡ ಭಾಷೆಗೆ ಅದರದ್ದೇ ಆದ ಘನತೆ ಹಾಗೂ ಗೌರವವಿದೆ ಎಂದು ಕಮಲ್ ಹಾಸನ್ ವಿರುದ್ಧ ಕಿಡಿಕಾರಿದರು.





