Mysore
25
haze

Social Media

ಸೋಮವಾರ, 09 ಫೆಬ್ರವರಿ 2026
Light
Dark

ಮಂಡ್ಯದಲ್ಲಿ ಸುಮಲತಾ ನಮಗೆ ಸಹಾಯ ಮಾಡಿಲ್ಲ: ಎಚ್‌ಡಿ ದೇವೇಗೌಡ

ಹಾಸನ: ಹಾಸನದಲ್ಲಿ ಕೆಲವು ಬಿಜೆಪಿಗರು ನಮಗೆ ಬೆಂಬಲ ಘೋಷಿಸದೇ ಇರುವುದು ನಿಜ. ಹಾಗೆಯೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಎಚ್‌ಡಿ ಕುಮಾರಸ್ವಾಮಿಗೆ ಸಹಾಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಹೇಳಿದ್ದಾರೆ. ಆ ಮೂಲಕ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ದೊಡ್ಡಗೌಡ್ರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿಗೆ ಬಿಜೆಪಿಯ ಸುಮಲತಾ ಅಂಬರೀಶ್‌ ಅವರು ಸಹಾಯ ಮಾಡಿಲ್ಲ. ಹಾಗಂತ ಕುಮಾರಸ್ವಾಮಿಗೆ ಬಹಳ ಅಪಾಯವಾಗಲಿದೆ ಎಂದು ಅರ್ಥವಲ್ಲ. ಆದರೂ ಸಹಾ ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪತ್ತಿನ ಸರ್ವೆ ಹಾಗೂ ಹಂಚಿಕೆ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆ ಕುರಿತು, ಈ ಬಗ್ಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ಭಾಗದ ಎಲ್ಲಾ ಕಡೆಗಳಲ್ಲಿಯೂ ನಾನು ಪ್ರಚಾರ ಮಾಡಿದ್ದೇನೆ. ಕಾವೇರಿ ಹೋರಾಟ ನಮ್ಮ ಜೀವನ್ಮರಣದ ಹೋರಾಟವಾಗಿದೆ. ಇದಕ್ಕಾಗಿ ನಾವು ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದು, ಮೋದಿ ಅವರನ್ನು ಪ್ರಧಾಯನ್ನಾಗಿ ಮಾಡಬೇಕು. ಮತ್ತು ಈ ಬಾರಿ ಬಿಜೆಪಿ ತಮಿಳುನಾಡಿನಲ್ಲಿ ಖಾತೆ ತೆರೆಯಲಿದೆ ಎಂದು ಎಚ್‌ಡಿಕೆ ತಿಳಿಸಿದರು.

Tags:
error: Content is protected !!