Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಚಾರ್ಜ್ ಶೀಟ್ ಸಲ್ಲಿಕೆ, ದರ್ಶನ್ ಪಾತ್ರ ಏನು.?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಸಹಚರರ ವಿರುದ್ಧ  3,991 ಚಾರ್ಜ್ ಶೀಟ್ ಸಲ್ಲಿಸಲಾಗಿದೆ, ಇದರಲ್ಲಿ ಕೊಲೆಯ ಸಂಪೂರ್ಣ ವಿವರ ಒಳಗೊಂಡಿದೆ.

ನಟ ದರ್ಶನ್ ಈ ಪ್ರಕರಣದಲ್ಲಿ ಎ2 ಆರೋಪಿ ಆಗಿದ್ದು, ಅವರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಚಾರ್ಜ್ ಶೀಟ್ ನಲ್ಲಿ, ದರ್ಶನ್ ಕಿಡ್ನಾಪ್, ಹಲ್ಲೆ, ಮತ್ತು ಕೊಲೆ ನಂತರ ಹಣ ನೀಡಿ ಪ್ರಕರಣವನ್ನು ಮುಚ್ಚಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ ಎಂಬ ಮತ್ತಿತರ ವಿವರಗಳಿವೆ.

ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಹಾಜರಿದ್ದರು ಮತ್ತು ಸ್ಥಳದಿಂದ ಪರಾರಿಯಾದ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವರ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತವು ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಕೂಡ ದೊರೆತಿವೆ. ಈ ಮಾಹಿತಿಯು ಕೋರ್ಟ್ ವಿಚಾರಣೆಯಲ್ಲಿ ಬಹಳ ಮುಖ್ಯವಾಗಿದೆ. ದರ್ಶನ್  ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗವಹಿಸಿದ್ದ ಕುರಿತು ಚಾರ್ಜ್ ಶೀಟ್ ನಲ್ಲಿ ದೃಢಪಡಿಸಲಾಗಿದೆ.

Tags:
error: Content is protected !!