Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅತ್ತ ಮಹಿಳೆಯರಿಗೆ ರಕ್ಷಣೆ ಬೇಕೆಂದು ಹೋರಾಟ.. ಇತ್ತ ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ

ಬೆಂಗಳೂರು:  ಅತ್ತ ಕೊಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.  ರಾಜ್ಯದಲ್ಲಿಯೂ ಸಹ ನಿನ್ನೆ(ಆ.17) ಸಾವಿರಾರು ವೈದ್ಯರು, ಯುವತಿಯರು, ಮಕ್ಕಳು ಹಾಗೂ ಯುವಕರು ಸೇರಿದಂತೆ ಕತ್ತಲಲ್ಲಿ ಕ್ಯಾಂಡಲ್‌ ಹಿಡಿದು ಮಹಿಳೆಯರ ಸುರಕ್ಷತೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಈ ನಡುವೆ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದುಹೋಗಿದ್ದು, ಆಟೋದಲ್ಲಿ ತೆರಳುತ್ತಿದ್ದ ಯುವತಿಯ ಮೇಲೆ  ಅತ್ಯಾಚಾರವಾಗಿದೆ.

ನಗರದ ಕೋರಮಂಗಲದ ಪಬ್‌ನಿಂದ ಮಧ್ಯರಾತಿ ಪಾನಮತ್ತರಾಗಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಮೂಲಕ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ ಅಪಘಾತವಾಗಿದೆ. ಬಳಿಕ ಯುವತಿ ಬೈಕ್‌ ಬಿಟ್ಟು ಆಟೋದಲ್ಲಿ ಮನೆಗೆ ತೆರಳಿದ್ದರು. ಈ ವೇಳೆ ಆಟೋ ಚಾಲಕ, ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ.

ಆಟೋ ಹತ್ತಿದ ಯುವತಿಯನ್ನು ಹೆಚ್‌ಎಸ್‌ಆರ್‌ ಲೇಔಟ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ  ಮಾಡಲಾಗಿದೆ. ಈ ಬಗ್ಗೆ ಹೆಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸದ್ಯ ಯುವತಿಯು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags: