ಬೆಂಗಳೂರು: ಯುವಕರು ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಇಂದು ವಿಶ್ವ ಹೃದಯ ದಿನದ ಅಂಗವಾಗಿ ವಾಕಥಾನ್‌ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಹೃದಯದ ಖಾಯಿಲೆ ಚಿಕ್ಕ ವಯಸ್ಸಿನಲ್ಲಿ ಗೊತ್ತಾಗಲ್ಲ. ನಮಗೆ ವಯಸ್ಸಾಗುತ್ತಾ ಹೋದಂತೆ ಅದರ ಪರಿಣಾಮ ನಮಗೆ ಅರಿವಾಗುತ್ತದೆ. ಆದ್ದರಿಂದ ಯುವಕರು ಈಗಿನಿಂದಲೇ ಆರೋಗ್ಯಯುತ ಜೀವನ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವಕರು ಪ್ರತಿ ದಿನ ಲವಲವಿಕೆಯಿಂದ ಇರಬೇಕು. ವಾಕ್ ಮಾಡಬೇಕು. ವಾಕ್ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ ಇದೆ. ಆದ್ದರಿಂದ ಪ್ರತಿ ದಿನ ವಾಕ್ ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.