Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಜು.15 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳ 15 ರಿಂದ 26 ರ ವರೆಗೆ ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ.

ವಿಧಾನಮಂಡಲದ ನಿಯಮಾವಳಿಯಂತೆ ಜೂನ್ ಇಲ್ಲವೇ ಜುಲೈ ನಲ್ಲಿ ಅಧಿವೇಶನ ನಡೆಸಬೇಕು. ಇದರಂತೆ ಜುಲೈ ತಿಂಗಳ 15 ರಿಂದ 26 ರವರೆಗೆ
ಅಂದರೆ ಹತ್ತು ದಿನಗಳ ಕಾಲ ನಡೆಸಲು ಸರ್ಕಾರ ಮುಂದಾಗಿದೆ.

ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕವನ್ನು ನಿಗದಿ ಪಡಿಸುವ ಅಧಿಕಾರವನ್ನು ಮುಖ್ಯ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಡಲಾಗಿದ್ದು, ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನದ ದಿನಾಂಕ ಅಂತಿಮಗೊಳಿಸಲಿದ್ದು, ಈ ಕುರಿತು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿತ್ತು.

ಇನ್ನು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ನಡೆಯುತ್ತಿರುವ ಮೊದಲ ಕಲಾಪ ಇದರಾಗಿರುವುದರಿಂದ ಆಡಳಿತ ಪಕ್ಷಗಳ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರ ಮೇಲೆ ಮುಗಿಬೀಳಲು ಸಜ್ಜಾಗಿವೆ. ಈ ಮೂಲಕ ಭಾರೀ ಜಟಾಪಟಿಗೆ ವಿಧಾನಮಂಡಲದ ಉಭಯ ಸದನಗಳು ಸಾಕ್ಷಿಯಾಗಲಿದೆ.

Tags: