Mysore
20
overcast clouds
Light
Dark

ವೀರಶೈವ ಲಿಂಗಾಯತರನ್ನು ಹೊರತುಪಡಿಸಿ ರಾಜ್ಯ ಆಳೋದು ಯಾರಿಗೂ ಸಾಧ್ಯವಿಲ್ಲ: ಬೊಮ್ಮಾಯಿ

ದಾವಣಗೆರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾತಿಗಣತಿಯ ಕುರಿತು ಕಿಡಿಕಾರಿದ್ದು, ವೀರಶೈವ ಲಿಂಗಾಯತರನ್ನು ಹೊರತುಪಡಿಸಿ ರಾಜ್ಯ ಆಳುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇನ್ನೂ ಮುಂದುವರೆದು ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಕಾರಣ ತಿಳಿಸಿದ ಬೊಮ್ಮಾಯಿ ಏಕೆಂದರೆ ನಮ್ಮೊಂದಿಗೆ ಎಲ್ಲಾ ತಳ ಸಮಯದಾಯ ಸೇರಿವೆ ಎಂದು ಹೇಳಿದ್ದಾರೆ. ನಮ್ಮೊಂದಿಗಿರುವ ಒಳಪಂಗಡಗಳನ್ನು ಬೇರ್ಪಡಿಸುವ ಕೆಲಸ ನಡೆದಿತ್ತು. ಸಂಸ್ಕಾರದ ತಿರುಳು ನಮ್ಮಲ್ಲಿ ಗಟ್ಟಿಯಾಗಿ ಉಳಿದಿದೆ. ಜಾತಿಗಣಗೆ ಬಗ್ಗೆ ಸ್ಪಷ್ಟ ನಿಲುವಿರಬೇಕು. ಶಿಕ್ಷಣ, ಆರ್ಥಿಕತೆ, ಸ್ಥಿತಿಗತಿ ಬಗ್ಗೆ ಜಾತಿಗಣತಿ ನಡೆದಿದೆ. ಜಾತಿಗಣತಿ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಸಮಾಜದಲ್ಲಿ ಗೊಂದಲ ನಿರ್ಮಾಣವಾಗಬಾರದು, ಪಾರದರ್ಶಕ, ವೈಜ್ಞಾನಿಕ ಜಾತಿಗಣತಿ ಆಗಬೇಕು, ಸಮಾಜಕ್ಕೆ ಅನ್ಯಾಯವಾಗರಬಾರದು ಎಂದು ಬೊಮ್ಮಾಯಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾತಿಗಣತಿ ಮಾಡುವ ಹೆಸರಿನಲ್ಲಿ ಪ್ರತ್ಯೇಕ ಮಾಡುವ ಕೆಲಸ ನಡೆದಿದೆ, ಅದು ಸಾಧ್ಯವಿಲ್ಲ. ಈಗ ಕರ್ನಾಟಕದಲ್ಲಿ ಆಗಿರುವುದು ಜಾತಿಗಣತಿ ಅಲ್ಲ, ಅದು ಶೈಕ್ಷಣಿಕ ಆರ್ಥಿಕ ಸಮೀಕ್ಷೆ, ಜಾತಿಗಣತಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ, ಅದು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ಜಾತಿಗಣತಿ ವೈಜ್ಞಾನಿಕವಾಗಿ ನಡೆಯಬೇಕಿದೆ ಎಂದು ಬೊಮ್ಮಾಯಿ ತಿಳಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ