Mysore
24
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಶೀಘ್ರದಲ್ಲೆ SSLC ಪೂರಕ ಫಲಿತಾಂಶ ಬಿಡುಗಡೆ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ಶೀಘ್ರದಲ್ಲೆ SSLC ಪೂರಕ ಫಲಿತಾಂಶ ಬಿಡುಗಡೆ ಮಾಡಲಿದೆ. ಕೆಎಸ್‌ ಇಎಬಿಯಿಂದ ಇಂದೇ ಫಲಿತಾಂಶ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಮತ್ತು ಫಲಿತಾಂಶ ಪಟ್ಟಿ ಡೌನ್‌ ಲೋಡ್‌ ಮಾಡಲು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಅಧಿಕೃತ ವೆಬ್‌ ಸೈಟ್‌ kseab.karnataka.gov.in ಮತ್ತು karresults.nic.in ಗೆ ಭೇಟಿ ನೀಡಿಬಹುದು.

SSLC ಪೂರಕ ಪರೀಕ್ಷೆಗಳು ಜೂನ್‌ ೧೪ ರಿಂದ ೨೧ರವರೆಗೆ ನಡೆದವು. KSEAB ಮೇ ೯ ರಂದು ಕರ್ನಾಟಕ SSLC ವಾರ್ಷಿಕ ಫಲಿತಾಂಶವನ್ನು ಪ್ರಕಟಿಸಿತ್ತು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗದ ಅಥವಾ ಇನ್ನೂ ಹೆಚ್ಚಿನ ಅಂಕಗಳನ್ನ ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು.

Tags: