Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಅಶಿಸ್ತು ಮರುಕಳಿಸಿದರೆ ವಜಾ: ಸ್ಪೀಕರ್ ಯು. ಟಿ ಖಾದರ್

ಮಂಗಳೂರು: ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಮುಂದೆಯೂ ಇದೇ ರೀತಿ ಮಾಡಿದ್ದಲ್ಲಿ ಅವರನ್ನು ವಜಾ ಮಾಡಲಾಗುತ್ತದೆ. ಬಳಿಕ ಕೋರ್ಟ್‌ನಲ್ಲಿ ನಿರ್ಧಾರವಾಗಲಿ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಖಡಕ್ ಎಚ್ಚರಿಕೆ ನೀಡಿದರು.

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ಸದನದ ಗೌರವ ಉಳಿಸಬೇಕಾದರೆ ಇಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ. ಸ್ಪೀಕರ್ ಸದನದ ಸುಪ್ರೀಂ ಪವರ್. ಡಿಫಮೇಷನ್ ಕಾಯ್ದೆ ಬಲವಾಗಿದೆ. ಆದರೆ ಸ್ಪೀಕರ್ ಸ್ಥಾನದಲ್ಲಿ ಹಿಂದೆ ಕುಳಿತವರು ಬಲವಾಗಿದ್ದರೆ ಎಲ್ಲವೂ ಸರಿಯಾಗುತ್ತದೆ‌. ಹಿಂದೆ ಇಂತಹ ಘಟನೆಗಳು ನಡೆದಾಗ ಅಂದಿನ ಸ್ಪೀಕರ್ ಸ್ಥಾನದಲ್ಲಿದ್ದವರು ಸರಿಯಾಗಿ ಕ್ರಮ ಕೈಗೊಳ್ಳದಿದ್ದ ಕಾರಣ, ಮತ್ತೆ ಇಂತಹ ಘಟನೆಗಳು ಮರುಕಳಿಸುವಂತಾಗಿದೆ. ಅವರಿಗೆ ಧೈರ್ಯ ಇರಲಿಲ್ಲ ಹಾಗಾಗಿ ಆರು ತಿಂಗಳ ಅಮಾನತು ಮಾಡಿಲ್ಲ. ನನಗೆ ಧೈರ್ಯ ಇದೆ ನಾನು ಮಾಡಿದ್ದೇನೆ ಎಂದು ಹೇಳಿದರು.

ಧನ ವಿನಿಯೋಗ ಬಿಲ್ ಪಾಸ್ ಆಗುವಾಗ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ. ಅಂದಿನ ಘಟನೆ ಇಡೀ ರಾಜ್ಯದ ಜನತೆಗೆ ಅಸಹ್ಯ ಮೂಡಿಸಿದೆ. ಸಭಾಧ್ಯಕ್ಷ ಪೀಠದ ಗೌರವ ಉಳಿಸಿಕೊಳ್ಳಲು ಮಿತ್ರ ಶಾಸಕರನ್ನು ಆರು ತಿಂಗಳವರೆಗೆ ಅಮಾನತು ಮಾಡಿದ್ದೇನೆ. ಯಾರೂ ಅದನ್ನು ಶಿಕ್ಷೆಯೆಂದು ಪರಿಗಣಿಸುವುದು ಬೇಡ. ಉತ್ತಮವಾದ ಜನಪ್ರತಿನಿಧಿಯಾಗಲು ಕೈಗೊಂಡ ಕ್ರಮ ಇದು ಎಂದರು.

ಈ ಗಲಾಟೆಯ ಗೊಂದಲದಲ್ಲಿ ಧನ ವಿನಿಯೋಗ ಬಿಲ್ ಪಾಸ್ ಮಾಡದಿದ್ದಲ್ಲಿ ಯಾವ ಅಭಿವೃದ್ಧಿಯೂ ಆಗುವುದಿಲ್ಲ. ಬೇರೆ ಬಿಲ್ ರೀತಿಯಲ್ಲಿ ಅದನ್ನು ಮುಂದೆ ಹಾಕಲೂ ಸಾಧ್ಯವಿಲ್ಲ. ಆದರೆ, ಅವರಿಗೆ ಫೈನಾನ್ಸ್ ಬಿಲ್ ಪಾಸ್ ಆಗುವಾಗಲೇ ಗದ್ದಲ ಎಬ್ಬಿಸಿ, ನಿಲ್ಲಿಸುವ ಉದ್ದೇಶವಿತ್ತು. ಅದಕ್ಕೆ ನಾವು ಅವಕಾಶ ಕೊಡಲಿಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರು.

Tags:
error: Content is protected !!