ಬೆಂಗಳೂರು : ಬೆಂಗಳೂರು-ಮೈಸೂರು ನಡುವಿನ ರೈಲು ಸಂಚಾರದಲ್ಲಿ ಹಲವಾರು ಮಹತ್ವದ ಬದಲಾವಣೆಗಳಾಗಿದ್ದು, ಪ್ರಯಾಣಿಕರು ಇತ್ತ ಗಮನ ಹರಿಸಬೇಕಿದೆ. ಈ ಮಾರ್ಗದ ಹಲವು ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ಮತ್ತು ಭಾಗಶಃವಾಗಿ ರುದ್ದುಗೊಳಿಸಲಾಗಿದೆ.
ನೈಋತ್ಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ 15ರ ಬಳಿಯ ಕಾಮಗಾರಿ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದಾಗಿದೆ, ಇನ್ನು ಕೆಲವು ಭಾಗಶಃ ರದ್ದುಗೊಂಡಿವೆ. ಇದಕ್ಕೆ ಪ್ರಯಾಣಿಕರ ಸಹಕಾರ ನೀಡಬೇಕು ಎಂದು ನೈರುತ್ಯ ರೈಲ್ವೆ ಮನವಿ ಮಾಡಿದೆ.
ರದ್ದುಗೊಂಡಿರುವ ರೈಲುಗಳ ಪಟ್ಟಿ
ಮಾ. ೬, ೦೭: ೧೬೦೨೧ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಮೈಸೂರು ಎಕ್ಸ್‌ಪ್ರೆಸ್
ಮಾ. ೭, ೦೮: ೨೦೬೨೩ ಮೈಸೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್
ಮಾ. ೭, ೦೮: ೨೦೬೨೪ ಕೆಎಸ್‌ಆರ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್
ಮಾ. ೭, ೦೮: ೧೬೦೨೨ ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
ಮಾ. ೭, ೦೮: ೦೬೨೬೭ ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು
ಮಾ. ೭, ೧೨: ೦೬೨೬೯ ಮೈಸೂರು- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್
ಮಾ. ೭, ೧೨: ೦೬೫೬೦ ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು
ಮಾ. ೭, ೧೨: ೦೬೨೭೦ ಎಸ್‌ಎಂವಿಟಿ ಬೆಂಗಳೂರು- ಮೈಸೂರು ವಿಶೇಷ ಎಕ್ಸ್‌ಪ್ರೆಸ್
ಮಾ. ೭, ೧೨: ೦೬೨೬೮ ಮೈಸೂರು-ಅರಸೀಕೆರೆ ಪ್ರತಿ ದಿನದ ವಿಶೇಷ ಎಕ್ಸ್‌ಪ್ರೆಸ್
ಮಾ. ೭, ೧೨ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು
ಮಾ. ೮, ೧೩ ೦೬೫೫೯ ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲು
ಮಾ. ೮, ೧೩ ೦೧೭೬೩ ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್
ಮಾ. ೮, ೧೩ ೦೬೫೨೬ ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು