ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪಡೆದಿರುವ ಜಮೀನಿಗೆ ಬದಲಾಗಿ ರೈತರಿಗೆ 50:50 ಸೈಟ್ ಕೊಡಲೇಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದ್ದಾರೆ.
ಮೈಸೂರು ಮುಡಾದಲ್ಲಿ ಜಿ.ಟಿ.ದೇವೇಗೌಡರ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿರುವ ಕುರಿತು ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಬುದ್ಧಿವಂತ, ಅವನಲ್ಲಿ ಶಕ್ತಿಯಿದೆ. ಒಂದು ಎಕರೆ ಭೂಮಿ ಸ್ವಾಧೀನಪಡಿಸಿ ದುಡ್ಡಿನ ಪರಿಹಾರ ನೀಡಿದ್ರೆ ಒಂದು ಸೈಟ್ ಕೊಡ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ರೆ 50:50ನಲ್ಲಿ ಸೈಟ್ ಕೊಡಬೇಕು. ರೈತರ ಜಮೀನಿಗೆ ಇದನ್ನು ಕಾನೂನು ಬದ್ಧವಾಗಿ ಕೊಡಬೇಕು ಎಂದು ಆಗ್ರಹಿಸಿದರು.