Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರಜ್ವಲ್‌ ಪೆನ್ ಡ್ರೈವ್‌ ಸಂಬಂಧ ಎಸ್‌ಐಟಿ ತಂಡದ ಮೊದಲ ಸಭೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಸೇರಿದ್ದು ಎನ್ನಲಾದ ಅಶ್ಲಿಲ ವಿಡಿಯೋ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಕೆಗೆ ನೀಡಿದ್ದು, ಈ ಸಂಬಧ ಇಂದು (ಏ.29) ವಿಶೇಷ ತನಿಖಾ ತಂಡ(ಎಸ್‌ಐಟಿ) ಸಭೆ ನಡೆಸಿದೆ.

ಎಸ್‌ಐಟಿ ಮುಖ್ಯಸ್ಥರಾದದ ಬಿ.ಕೆ ಸಿಂಗ್‌ ಅವರ ನೇತೃತ್ವದಲ್ಲಿ ನಗರದ ಸಿಐಡಿ ಪ್ರಧಾನ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಐಪಿಎಸ್‌ ಅಧಿಕಾರಿಗಳಾದ ಸುಮಾನ್‌ ಡಿ ಪನ್ನೇಕರ್‌, ಸೀಮಾ ಲಟ್ಕರ್‌ ಸಭೆಯಲ್ಲಿದ್ದರು.

ವಿಶೇಷ ತನಿಖಾ ತಂಡದಲ್ಲಿ ಇರಬೇಕಾದ ಅಧಿಕಾರಿ, ಸಿಬ್ಬಂದಿಗಳೇಷ್ಟು, ಯಾವ ರ್ಯಾಂಕ್‌ ಅಧಿಕಾರಿಗಳನ್ನು ತನಿಖಾಧಾಕಾರಿಯಾಗಿ ನೇಮಿಸಿಕೊಳ್ಳಬೇಕು, ತನಿಕೆಯ ಸ್ವರೂಪ ಹೇಗಿರಬೇಕು ಎಂಬೆಲ್ಲಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬಳಿಕ ಯಾರನ್ನು ವಿಚಾರಣೆಗೆ ಒಳಪಡಿಸಬೇಕು, ಸಾಕ್ಷ್ಯಾಧಾರಗಳ ಸಂಗ್ರಹ ಹೇಗಿರಬೇಕು, ನಂತರ ಸಂತ್ರಸ್ತೆಯರ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವುದು, ಪ್ರಕರಣ ಸಂಬಂಧ ಎಷ್ಡು ದೂರುಗಳು ದಾಖಲಾಗಿದೆ ಎಂಬೆಲ್ಲಾ ಮಹತ್ವ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

Tags: