ಬೆಂಗಳೂರು: ಮಾಜಿ ಸಚಿವ ರೇವಣ್ಣ ಹಾಗೂ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳಾ ಲೈಂಗಿಕ ದೌರ್ಜನ್ಯದಡಿ ಈ ಹಿಂದೆ ಮೊದಲ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಜ್ವಲ್ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ದೂರಿನ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದೆ.
ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ದೂರು ನೀಡಿರುವ ಸಂತಸ್ತ್ರ ಮಹಿಳೆಯನ್ನು ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ.
ನ್ಯಾಯಾಧೀಶರು ಸಂತಸ್ತ್ರ ಮಹಿಳೆಯ ಹೇಳಿಕೆ ಪಡೆಯಲಿದ್ದಾರೆ. ನ್ಯಾಯಧೀಶರು ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣನಿಗೆ ನೀರಿಕ್ಷಣಾ ಜಾಮೀನು ಸಿಗುವುದು ಕಷ್ಟವಾಗುತ್ತದೆ.
ಇಡೀ ಪ್ರಕರಣದಲ್ಲಿ ರೇವಣ್ಣ ಮೊದಲ ಆರೋಪಿ ಹಾಗೂ ಪ್ರಜ್ವಲ್ ರೇವಣ್ಣನನ್ನು ಎರಡನೇ ಆರೋಪಿಯಾಗಿ ಮಾಡಲಾಗಿದೆ. ಈ ನಡುವೆ ರೇವಣ್ಣ ನೀರಿಕ್ಷಣಾ ಜಮೀನಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.