Mysore
28
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧನೆ : ಕ್ಷಮೆ ಕೇಳುವಂತೆ ಬುಡಕಟ್ಟು ಜನಾಂಗದಿಂದ ಸಿಎಂಗೆ ಪತ್ರ!

ಹುಣಸೂರು : ದೇಶದ ರಾಷ್ಟ್ರಪತಿ ದ್ರೌತಿ ಮುರ್ಮು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಸಂಬೋಧಿಸಿದ್ದನ್ನು ವಿರೋಧಿಸಿ, ಈ ಕೂಡಲಿ ಕ್ಷಮೆ ಕೇಳುವಂತೆ ಹುಣಸೂರು ಬುಡಕಟ್ಟು ಜನಾಂಗದವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತ ರಾಷ್ಟ್ರಪತಿ ದ್ರೌಪದಿ ಮುರ್ಮುರವರನ್ನು ಏಕವಚನದಲ್ಲಿ ಸಂಬೋಧಿಸಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ.

ಆದಿವಾಸಿಗಳಾದ ನಾವು ತಮ್ಮನ್ನು ಗೌರವದಿಂದ ಕಾಣುತ್ತೇವೆ. ಸಿದ್ದರಾಮಯ್ಯನವರು ಎಂದರೇ ಸಾಮಾಜಿಕ ನ್ಯಾಯ ಪ್ರತಿಪಾಧಿಸುವ ನಾಯಕ ಎಂದು ನಾವು ಭಾವಿಸಿದ್ದೇವೆ. ಆದರೆ ತಾವು ರಾಷ್ಟ್ರಪತಿ ದ್ರೌಪದಿ ಮುರ್ಮುರವರನ್ನು

ಏಕವಚನದಲ್ಲಿ ಸಂಬೋಧಿಸಿ ತಮ್ಮ ಭಾಷಣದಲ್ಲಿ ನಮಗೆಲ್ಲರಿಗೂ ಅಪಮಾನ ಮಾಡಿದ್ದೀರಿ. ಸಂವಿಧಾನದ ಹೆಸರಿನಲ್ಲಿ ಅಧಿಕಾರ ನಡೆಸುವ ತಾವು ಘನತೆಯ ಸ್ಥಾನದಲ್ಲಿ ಇರುವಿರಿ.

ಇಂಥವರು ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಸಂಬೋಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಷ್ಠಾಚಾರಕ್ಕೆ ವಿರುದ್ಧವಾಗಿದೆ. ತಾವು ತಮ್ಮ ನಡವಳಿಯನ್ನು ತಿದ್ದಿಕೊಳ್ಳಬೇಕು ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೂಡಲೇ ರಾಷ್ಟ್ರಪತಿಗಳನ್ನು ಹಾಗೂ ಕರ್ನಾಟಕ ಜನತೆಯ ಕ್ಷಮೆಯನ್ನು ಸಾರ್ವಜನಿಕವಾಗಿ ಕೇಳಬೇಕೆಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ರಾಜ್ಯ ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ಬಿ.ಎಸ್.ವಿಠಲ್ ನಾಣಚ್ಚಿ ಹಾಗೂ ಆದಿವಾಸಿ ಮಹಿಳಾ ಮುಖಂಡರು ಬೊಮ್ಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅಲ್ಲದೆ ೨ನೇ ಭಾರಿಗೆ ಮುಖ್ಯಮಂತ್ರಿಯಾಗಿರುವ ತಾವು ಕಾಡಿನಿಂದ ಹೊರ ಹಾಕಿರುವ ೩೪೧೮ ಆದಿವಾಸಿ ಕುಟುಂಬಗಳಿಗೆ ಪುರ್ನವಸತಿ ನೀಡಬೇಕೆಂದು ಹೈಕೋರ್ಟ್ ಆದೇಶ ನೀಡಿ ದಶಕವೇ ಆಗಿದ್ದರೂ ಅದನ್ನು ಕೂಡ ಜಾರಿಗೊಳಿಸದೆ ೩೪೧೮ ಆದಿವಾಸಿ ಕುಟುಂಬಗಳಿಗೆ ನ್ಯಾಯ ನೀಡುವಲ್ಲಿ ಹಿಂದೆ ಬಿದ್ದಿದ್ದೀರಿ. ಆದಿವಾಸಿಗಳ ಬಗ್ಗೆ ಗೌರವ ಹೊಂದಿ ತಮ್ಮ ಕರ್ತವ್ಯ ಸರಿಯಾಗಿ ಪಾಲಿಸಿ ಎಂದು ಆಗ್ರಹಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!