Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು: ಸಚಿವ ಶಿವರಾಜ ತಂಗಡಗಿ

ರಾಯಚೂರು: ಸಿಎಂ ಸಿದ್ದರಾಮಯ್ಯರಿಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಈ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಸಿಎಂ ಡಿ.ದೇವರಾಜು ಅರಸು ಅವರ ಕಾಲದಲ್ಲಿ ಐದು ವರ್ಷಗಳ ಹಿಂದೆ ಕರ್ನಾಟಕ ನಾಮಕರಣಗೊಂಡಿತ್ತು. ಇದೀಗ ಆಧುನಿಕ ದೇವರಾಜ ಅರಸು ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಸಮಯದಲ್ಲಿಯೇ ರಾಜ್ಯ ಸರ್ಕಾರದಿಂದ ಕರ್ನಾಟಕ ಸಂಭ್ರಮ-50ನ್ನು ಆಚರಿಸಲಾಗುತ್ತಿದ್ದು, ರಾಜ್ಯದ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರ ಸಹಿ ಕನ್ನಡದಲ್ಲಿ ಇವೆ. ಕಡತಗಳು ಕೂಡ ಕನ್ನಡದಲ್ಲಿ ಇರಬೇಕು ಎಂದು ಆದೇಶವನ್ನು ಹೇಳಿದರು. ನವೆಂಬರ್.‌1ರೊಳಗಾಗಿ ವಿಧಾನಸೌಧದ ಮುಂದೆ ಭುವನೇಶ್ವರಿ ಪ್ರತಿಮೆ ಮಾಡಲು ಹೇಳಿದ್ದಾರೆ. ಅಲ್ಲದೇ ವಿಧಾನಸೌಧದಲ್ಲಿ ನಮಗೆ ಸಂಧಿ ಮತ್ತು ವ್ಯಾಕರಣದ ಮಾಹಿತಿ ಬಗ್ಗೆ ತಿಳಿಸುತ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅವರನ್ನು ಕನ್ನಡರಾಮಯ್ಯ ಎಂದು ಕರೆಯಬೇಕು. ಹೆಸರಾಯ್ತು ಕರ್ನಾಟಕ, ಉಸಿರಾಯ್ತು ಕನ್ನಡ ಎಂಬ ಕಾರ್ಯಕ್ರಮದಡಿಯಲ್ಲಿ ಈ ವರ್ಷ ನವೆಂಬರ್.1ರೊಳಗಾಗಿ ನಾಲ್ಕು ಕಾರ್ಯಕ್ರಮ ಮಾಡಲು ಚಿಂತನೆ ಮಾಡಿದ್ದೇವೆ. ಪ್ರಥಮ ಕಾರ್ಯಕ್ರಮ ಮೈಸೂರಿನಿಂದ ಮಾಡಲಾಗಿದೆ. ಹೀಗಾಗಿ ಮೈಸೂರಿನಲ್ಲಿ 15 ಗೋಷ್ಠಿಗಳನ್ನು ಮಾಡಲಾಗಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿ ಯಶಸ್ವಿ ಕನ್ನಡ ಕಾರ್ಯಕ್ರಮ ಮಾಡಲಾಗಿದೆ. ಆದರೆ ಇದೀಗ ಕಲ್ಯಾಣ ರಾಜ್ಯದ ಗಡಿ ಭಾಗವಾದ ರಾಯಚೂರಿನಲ್ಲಿ ಇದು ಮೂರನೇ ಕಾರ್ಯಕ್ರಮವಾಗಿದೆ. ಗೋಕಾಕ್‌ ಚಳುವಳಿ ಹಿನ್ನೋಟ-ಮುನ್ನೋಟ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

Tags: