ಬಳ್ಳಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸಂಬಂಧ ಪ್ರಾಷಿಕ್ಯೂಷನ್ ಹೊರಡಿಸಿರುವ ರಾಜ್ಯಪಾಲರ ನಡೆ ಬಗ್ಗೆ ಸಚಿವ ಜಮೀರ್ ಅಹ್ಮದ್ ಬೇಸರ ಹೊರಹಾಕಿದ್ದಾರೆ.
ರಾಜಕೀಯ ಒತ್ತಡದಿಂದಾಗಿ ರಾಜ್ಯಪಾಲರು ಪ್ರಾಷಿಕ್ಯೂಷನ್ ಹೊರಡಿಸಿದ್ದಾರೆ. ಇದರಿಂದ ಅವರಿಗಾಗಲೀ ಪಕ್ಷಕ್ಕಾಗಲಿ ಯಾವುದೇ ಹಾನಿಯಾಗುವುದಿಲ್ಲ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಜಮೀರ್ ಹೇಳಿದರು.
ಬಿಜೆಪಿ ಅಧಿಕಾರಾವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಈಗ ಸಿದ್ದರಾಮಯ್ಯ ಅವರ ಮೇಲೆ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡಿಯೂ ಯಾವುದೇ ಯಶಸ್ಸು ಕಾಣದ ಹಿನ್ನೆಯಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಕಾನೂನು ಕ್ರಮಕ್ಕೆ ಜಾರಿ ಮಾಡಿಸಿರುವುದು ರಾಜಕೀಯ ಷಡ್ಯಂತರ ಎಂದು ಕಿಡಿಕಾರಿದರು.
ನಮ್ಮದು ಬಡವರ, ಮಹಿಳೆಯರ ಹಾಗೂ ಜನಪರ ಸರ್ಕಾರವಾಗಿದೆ. ಜನರ ಹಿತಕ್ಕಾಗಿ ಪಂಚ ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದ ಕಾಂಗ್ರೆಸ್ ಪರವಾದ ಅಲೆಯಿದೆ ಇದನ್ನು ಸಹಿಸದೇ ಸರ್ಕಾರ ಅಸ್ಥಿರಗೊಳಿಸಲು ಸಂಚು ರೂಪಿಸಲಾಗುತ್ತಿದೆ. ಬಿಜೆಪಿಯ ಯಾವುದೇ ಹುನ್ನಾರುಗಳಿಗೆ ನಾವು ಧಕ್ಕುವುದಿಲ್ಲ, ಈ ಎಲ್ಲಾ ವಿವಾದಗಳಿಗೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.