ಬೆಂಗಳೂರು: ಯಾರೋ ಕಟ್ಟಿದ ಕೋಟೆಯನ್ನು ತನ್ನದು ಎಂದು ಮೊಂಡುವಾದ ಮಾಡುವುದು ಸಿಎಂ ಸಿದ್ದರಾಮಯ್ಯ ಅವರ ಜಾಯಮಾನ ಎಂದು ಬಿಜೆಪಿಕಿಡಿಕಾರಿದೆ.
ಬೆಂಗಳೂರಿನ ಬಡವರಿಗೆ ನಿರ್ಮಿಸಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಬಿಎಪಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.
ಯಾರೋ ಕಟ್ಟಿದ ಕೋಟೆಯನ್ನು ತನ್ನದು ಎಂದು ಮೊಂಡುವಾದ ಮಾಡುವುದು ಸಿಎಂ ಸಿದ್ದರಾಮಯ್ಯ ಅವರ ಜಾಯಮಾನ. ಕೇಂದ್ರ ಸರ್ಕಾರ ನೀಡುತ್ತಿದ್ದ ಅಕ್ಕಿಗೆ ತಮ್ಮ ಹೆಸರನ್ನು ಲೇಬಲ್ ಮಾಡಿ, ಅಕ್ಕಿ ಕೊಟ್ಟಿದ್ದು ತಾವು ಎಂದು ಸುಳ್ಳು ಹೇಳಿದ್ದ ಸಿದ್ದರಾಮಯ್ಯ, ಈಗ ಆ ಸುಳ್ಳಿನ ಸರಣಿಯನ್ನು ಮುಂದುವರಿಸಿದ್ದಾರೆ.

ಪಿಎಂ ಆವಾಸ್ ಯೋಜನೆಯಡಿ ಬೆಂಗಳೂರಿನ ಬಡವರಿಗೆ ನಿರ್ಮಿಸಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಸಹ ಈಗ ತಮ್ಮದು ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಅಂದ ಹಾಗೆ, ಯಾರದೋ ಶ್ರಮದ ಫಲವನ್ನು ತಮ್ಮದು ಎಂದು ಕ್ರೆಡಿಟ್ ತೆಗೆದುಕೊಳ್ಳುವ ಈ ಬುದ್ದಿಯನ್ನು ನೀವು ಕಲಿತಿದ್ದಾದರೂ ಎಲ್ಲಿಂದ ಸಿದ್ದರಾಮಯ್ಯ ಅವರೇ..?? ಉತ್ತರಿಸಿ ಎಂದಿದೆ.





