ಮೈಸೂರು: ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್‌ರವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ನೀಡಿರುವ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಸಚಿವರಾದ ಭೈರತಿ ಸುರೇಶ್ ಅವರು ಒಬ್ಬ ಹೆಣ್ಣಿನ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಅವರ ಸಚಿವ ಸ್ಥಾನಕ್ಕೆ ಗೌರವ ತರುವಂತದ್ದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ʼಶೋಭಾ ಕರಂದ್ಲಾಜೆ ಪುಟವಿಟ್ಟ ಚಿನ್ನವಿದ್ದಂತೆ. ಸಚಿವರಾದ ಭೈರತಿ ಸುರೇಶ್‌ರವರ ಈ ಹೇಳಿಕೆ ಅವರ ಕೀಳುಮಟ್ಟದ ಭಾವನೆಯನ್ನು ತೋರಿಸುತ್ತದೆ. ಸುರೇಶ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತಿದ್ದಾರೆʼ ಎಂದು ಸೋಮಣ್ಣ ಆರೋಪಿಸಿದರು.
ಚನ್ನಪಟ್ಟಣದ ವಿಧಾನಸಭೆ ಉಪಚುನಾವಣೆಯ ವಿಚಾರವಾಗಿ ಸಿ.ಪಿ. ಯೋಗೆಶ್ವರ್ ಅವರು ಪಕ್ಷ ತೊರೆದು ಹೋಗುವ ನಿರ್ಧಾರ ಮಾಡಬಾರದಿತ್ತು. ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದು, ರಾಜ್ಯ ಸರ್ಕಾರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಲಿದೆ ಎಂದರು.
ಮುಡಾ ಪ್ರಕರಣವನ್ನು ಜಾರಿ ನಿರ್ದೇಶನಾಲಯವು(ED) ಕೈಗೆತ್ತಿಕೊಂಡಿದ್ದು, ತಾರ್ಕಿಕವಾಗಿ ಫಲಿತಾಂಶ ಬಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(MUDA) ಸ್ವಚ್ಛವಾಗಲಿದೆ ಎಂದು ಹೇಳಿದ್ದಾರೆ.





