ಬೆಂಗಳೂರು: ರಾಜ್ಯದ ಜನತೆ ಜಾತಿ ಗಣತಿ ವರದಿ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.11) ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಚಿವ ಸಂಪುಟದಲ್ಲಿ ಜಾರಿಯಾಗಲಿರುವುದು ಜಾತಿ ಗಣತಿ ಅಲ್ಲ, ಅದೊಂದು ಸಾಮಾಜಿಕ-ಆರ್ಥಿಕ ಸಮೀಕ್ಷೆಯಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ಟ್ರಜೋರಿಯಲ್ಲಿ ಇಟ್ಟಿದ್ದವು. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಜಾತಿಗಣತಿ ವರದಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು.
ಜಾತಿ ಗಣತಿ ವರದಿಯ ಬಗ್ಗೆ ಯಾರೂ ಆತಂಕಪಡುವವ ಅವಶ್ಯಕತೆ ಇಲ್ಲ. ಇದು ಜನರ ಸಮೀಕ್ಷೆ, ಜಾತಿ ಸಮೀಕ್ಷೆ ಅಲ್ಲ. ವರದಿ ಕುರಿತು ಸಂಪುಟದಲ್ಲಿ ಚರ್ಚೆಯಾದ ಬಳಿಕ ಮಾತನಾಡುತ್ತೇನೆ. ಆದರೆ ಈಗ ಬರುತ್ತಿರುವ ಅಂಕಿ-ಅಂಶಗಳು ಊಹಾಪೋಹಗಳು ಎಂದರು.





