Mysore
35
scattered clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಶಕ್ತಿ ಯೋಜನೆ ಟಿಕೆಟ್ ದುರ್ಬಳಕೆ : ಬಿಎಂಟಿಸಿ ಐವರು ಕಂಡಕ್ಟರ್‌ ಅಮಾನತು

ಬೆಂಗಳೂರು : ಶಕ್ತಿ ಯೋಜನೆಯ ಮಹಿಳಾ ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೂ ನೀಡಿ ಹಣ ಸಂಗ್ರಹಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಬೇಕಿದ್ದ ಹಣವನ್ನು ಲಪಟಾಯಿಸಿದ ಆರೋಪದಲ್ಲಿ ಐವರು ಬಸ್ ಕಂಡಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.

ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆ ವೇಳೆ ಈ ವಂಚನೆ ಬಯಲಾಗಿದ್ದು, ಒಟ್ಟು 1,82,568 ರೂಪಾಯಿ ವಂಚನೆಯಾಗಿರುವುದು ಪತ್ತೆಯಾಗಿದೆ. ಕನ್ನಡ ಓದಲು ಬಾರದ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬೆಂಗಳೂರು ಡಿಪೋದ ಕಂಡಕ್ಟರ್‌ ಸೂರ್ಯನಾರಾಯಣ, ಬೊಮ್ಮಲಿಂಗೇಶ್, ಬ್ರಿಜೇಶ್ ಬಾಬು,ಮೋಹನ್,ಎನ್. ಪ್ರಕಾಶ್ ವಂಚನೆ ಪ್ರಕರಣದಲ್ಲಿ ಅಮಾನತುಗೊಂಡವರು.

ಈ ಕಂಡಕ್ಟರ್‌ಗಳು ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ಪುರುಷರಿಗೂ ಕೊಟ್ಟು ಹಣ ಪಡೆದು, ಅದನ್ನು ತಮ್ಮ ವೈಯಕ್ತಿಕ ಯುಪಿಐ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ತನಿಖೆ ವೇಳೆ ಅವರ ಬ್ಯಾಂಕ್ ಖಾತೆಗಳಲ್ಲಿ ಸಾವಿರಾರು ರೂಪಾಯಿ ಹಣ ಇರುವುದು ಕಂಡುಬಂದಿದೆ. ಬಿಎಂಟಿಸಿ ಈಗಾಗಲೇ ಐವರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕೂ ಮುಂಚೆಯೂ ಇದೇ ರೀತಿಯ ವಂಚನೆಗೆ ಸಂಬಂಧಿಸಿ ಕೆಲವು ಕಂಡಕ್ಟರ್‌ಗಳನ್ನು ಅಮಾನತುಗೊಳಿಸಲಾಗಿತ್ತು.

Tags:
error: Content is protected !!