ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಟ ಜಗ್ಗೇಶ್ ಭಾವನಾತ್ಮಕ ಪೋಸ್ಟ್.
ನಟ ಜಗ್ಗೇಶ್ ಜ್ವರದಿಂದ ಬಳಲುತ್ತಿದ್ದು, ಹಾಸಿಗೆಯಿಂದ ಏಳಲೂ ಆಗುತ್ತಿಲ್ಲ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ನನ್ನನ್ನು ಗೀತಾ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.
ನಾನು ಹೋಗಿದ್ದೆ. ಅಲ್ಲಿ ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹಲವರು ಬಂದಿದ್ದರು. ಫೋಟೋ ಬೇಡ ಎಂದು ಹೇಳಿದರೆ ಕಷ್ಟ ಆಗುತ್ತದೆ. ಮಾಸ್ಕ್ ಹಾಕಿದರೆ ಏನೋ ತಿಳಿದುಕೊಳ್ಳುತ್ತಾರೆಂದು ಬಂದವರಿಗೆಲ್ಲ ಫೋಟೋ ತೆಗೆಸಿಕೊಳ್ಳಲು ಸಹಾಯ ಮಾಡಿದೆ.
ಆದರೆ, ನನಗೆ ಅನಾರೋಗ್ಯ ನೀಡಿದರು. ದಯವಿಟ್ಟು ಯಾರಿಗಾದರೂ ಶೀತ, ಜ್ವರ, ಅನಾರೋಗ್ಯವಿದ್ದರೆ ಮನೆಯಲ್ಲಿ ಇರಿ. ಬೇರೆಯವರಿಗೆ ತೊಂದರೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.