Mysore
20
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

SCSP ಮತ್ತು TSP ಯೋಜನೆಯ ಹಣ ಕಾಂಗ್ರೆಸ್ ಗ್ಯಾರಂಟಿಗಳಿಗೆ ಬಳಕೆ

ಬೆಂಗಳೂರು : ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆಂದು ಬಜೆಟ್‌ ನಲ್ಲಿ ಮೀಸಲಿಟ್ಟಿದ್ದ ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

SCSP ಮತ್ತು TSP ಗೆ ಬಜೆಟ್‌ ನಲ್ಲಿ ಮೀಸಲಿಟ್ಟ ಒಟ್ಟು ಹಣದಲ್ಲಿ ೧೪,೨೮೨ ಕೋಟಿ ರೂ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಅನುಮತಿ ನೀಡಿದೆ. ೨೪ ಮತ್ತು ೨೫ ನೇ ಆರ್ಥಿಕ ವರ್ಷದಲ್ಲಿ SCSP ಮತ್ತು TSP ಅಡಿಯಲ್ಲಿ ಮೀಸಲಿಟ್ಟ ೩೯೧೨೧೪೬ ಕೋಟಿ ರೂ ಹಣವನ್ನು ಖರ್ಚು ಮಾಡುವ ಪ್ರಸ್ತಾಪವುಳ್ಳ ಕ್ರಿಯಾ ಯೋಜನೆಗೆ SCSP ಮತ್ತು TSP ರಾಜ್ಯ ಅಭಿವೃದ್ಧಿ ಪರಿಷತ್‌ ಇಂದು ಅನುಮೋದನೆ ನೀಡಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನ ವರ್ಗಾವಣೆಗೆ ತೀರ್ಮಾನ ಕೈಗೊಂಡು ಅನುಮತಿ ನೀಡಲಾಗಿದೆ. ಯುವನಿಧಿಗೆ  ೧೭೫ ಕೋಟಿ, ಶಕ್ತಿಯೋಜನೆಗೆ ೧೪೫೧ ಕೋಟಿ , ಗೃಹಲಕ್ಷ್ಮೀ ಗೆ ೭೮೮೧ ಕೋಟಿ, ಅನ್ನಭಾಗ್ಯ ನಗದು ೨೧೮೭  ಕೋಟಿ ಹಾಗೂ ಗೃಹಜ್ಯೋತಿ ಗೆ ೨೫೮೫ ಕೋಟಿ ರೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.

Tags:
error: Content is protected !!