ಬೆಂಗಳೂರು : ಜಾತಿ ಜನಗಣತಿ ಮರುಸರ್ವೆ ಆಗುವುದಿಲ್ಲ. ಕೇವಲ ತಿದ್ದುಪಡಿ ಮಾತ್ರ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೊಂದಿಗೂ ಸಮಾಲೋಚಿಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಾವು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾಗಿ ತಿಳಿಸಿದರು.
ಅಭಿಪ್ರಾಯ ಸಂಗ್ರಹಿಸುವ ಸಲುವಾಗಿಯೇ ಎಲ್ಲಾ ಸಚಿವರಿಂದಲೂ ಲಿಖಿತ ಹೇಳಿಕೆ ಪಡೆಯಲಾಗಿದೆ. ಎಲ್ಲರೂ ಬಹುತೇಕ ಸರ್ವಾನುಮತದ ಅಭಿಪ್ರಾಯ ಪಡೆಯುವಂತೆ ಸಲಹೆ ನೀಡಿದ್ದಾರೆ. ಅದರ ಭಾಗವಾಗಿಯೇ ಕಾಂಗ್ರೆಸ್ ಹೈಕಮಾಂಡ್‍ನ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವ ಸಂಪುಟ ಸಭೆಗೂ ಮುನ್ನ ಹೇಳಿದರು.
ಯಾರಿಗೂ ತೊಂದರೆಯಾಗದಂತೆ ನಿರ್ಧಾರ ಕೈಗೊಳ್ಳಲು ಸರ್ಕಾರ ಆಸಕ್ತಿ ಹೊಂದಿದೆ. ಇಲ್ಲಿ ಮುಖ್ಯಮಂತ್ರಿಯವರ ಹಿನ್ನಡೆ, ಮುನ್ನಡೆ ಎಂಬ ಅಭಿಪ್ರಾಯವಿಲ್ಲ. ಎಲ್ಲರಿಗೂ ಅವಕಾಶ ಕೊಟ್ಟು ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ 90 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಈಗಾಗಲೇ ನಡೆದಿರುವ ಸಮೀಕ್ಷೆಗೆ ಪರ್ಯಾಯವಾಗಿ ಮರು ಸಮೀಕ್ಷೆ ಮಾಡುವುದಿಲ್ಲ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸಮೀಕ್ಷಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುತ್ತದೆ. ಪ್ರತಿ ಕ್ಷೇತ್ರವಾರು ಜಾತಿವಾರು ಜನಸಂಖ್ಯೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ. ಅದನ್ನು ಪ್ರತಿಯೊಬ್ಬರು ಪರಿಶೀಲಿಸಿಕೊಳ್ಳಲು ಅವಕಾಶವಾಗುತ್ತದೆ. ಇದನ್ನೇ ಮರು ಸರ್ವೆ ಎನ್ನಬೇಕು ಎಂದು ಹೇಳಿದರು.
ಮತ್ತೊಬ್ಬ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ಅಂಕಿ ಅಂಶದಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ತಹಸೀಲ್ದಾರರ ಮುಂದೆ ಪ್ರಶ್ನಿಸಬಹುದು. ಬದಲಾವಣೆಗೆ ತಹಸೀಲ್ದಾರ್ ಅವರಿಗೆ ಅಧಿಕಾರ ನೀಡಲಾಗುತ್ತದೆ ಎಂದರು. ಜನರಿಗೆ ಗೊಂದಲವಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ. ಮನೆ ಮನೆಯ ಸಮೀಕ್ಷೆಯನ್ನು ಮತ್ತೊಮ್ಮೆ ನಡೆಸಿದರೂ ಚಿಂತೆಯಿಲ್ಲ. ಆದರೆ ಎಲ್ಲಾ ವ್ಯತ್ಯಾಸಗಳೂ ಸರಿ ಹೋಗಬೇಕು. ಇಲ್ಲವಾದರೆ ನಮ್ಮ ಸರ್ಕಾರದ ತಲೆ ಮೇಲೆ ಈ ಆರೋಪ ಸುತ್ತುತ್ತಲೇ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಮರು ಸಮೀಕ್ಷೆ ಮಾಡಿದರೆ ಮಾಡಬಹುದು ಎಂದರು.
ಕಾಂತರಾಜು ಆಯೋಗದ ವರದಿ ಹಳೆಯದು ಎಂಬ ಅಭಿಪ್ರಾಯಗಳಿವೆ. ಇಷ್ಟು ದಿನ ವರದಿ ಬಾಕಿ ಇಡಬಾರದಿತ್ತು. ಬೇರೆ ಬೇರೆ ಸಮುದಾಯಗಳು ಮತ್ತು ಮಠಾ??ಶರು ವಿರೋಧ ಮಾಡಿದ್ದರಿಂದಾಗಿ ಪರಿಷ್ಕರಣೆ ನಡೆಸಬೇಕಾಗಿದೆ.





