Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬೆಂಗಳೂರಿನ ಎಲೆಕ್ಟ್ರಿಕ್‌ ಸ್ಕೂಟರ್‌ ಶೋ ರೂಂನಲ್ಲಿ ಅಗ್ನಿ ದುರಂತ; ಓರ್ವ ಯುವತಿಯ ಸಜೀವ ದಹನ

ಬೆಂಗಳೂರು: ನಗರದ ರಾಜ್‌ಕುಮಾರ್‌ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್‌ ಸ್ಕೂಟರ್‌ ಶೋ ರೂನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಓರ್ವ ಯುವತಿ ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿದ್ದಾರೆ.

ನಗರದ ಸ್ಕೂಟರ್‌ ಶೋ ರೂಂನಲ್ಲಿ ಇಂದು(ನ.19) ಸುಮಾರು ಸಂಜೆ 5.30 ಗಂಟೆಯ ವೇಳೆಗೆ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಅಗ್ನಿ ದುರಂತ ಸಂಭವಿಸಿದ್ದು, ನೋಡು ನೋಡುತ್ತಿದ್ದಂತೆಯೇ ಇಡೀ ಶೋ ರೂಂಗೆ ಬೆಂಕಿ ಆವರಿಸಿ ಧಗಧಗನೆ ಉರಿದಿದೆ. ಈ ಘಟನೆಯಲ್ಲಿ ಸೇಲ್ಸ್‌ ಗರ್ಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಪ್ರಿಯಾ(20) ಎಂಬುವವರು ಶೋ ರೂಂ ಒಳಗೆಯೇ ಸಿಲುಕಿಕೊಂಡಿದ್ದು, ಹೊರ ಬರಲು ಆಗದೇ ಭೀಕರ ಅಗ್ನಿ ಜ್ವಾಲೆಗೆ ಬಲಿಯಾಗಿ ಸಜೀವ ದಹನವಾಗಿದ್ದಾರೆ.

ಇನ್ನು ಸುಟ್ಟು ಕರಕಲಾಗಿದ್ದ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿಯವರು ಹೊರತೆಗೆದಿದ್ದು, ಬೆಂಕಿಯನ್ನು ಆರಿಸಲು ಹರಸಾಹಸ ಮಾಡಿದ್ದಾರೆ. ಅಲ್ಲದೇ ಈ ಶೋ ರೂಂನಲ್ಲಿದ್ದ 45 ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ರಾಜಾಜಿನಗರ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದಾರೆ.

Tags: