Mysore
16
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಟೆನ್ನಿಸ್‌ ಕ್ರೀಡೆ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ಎಸ್‌ಎಂ ಕೃಷ್ಣ

ಬೆಂಗಳೂರು: ಬೆಂಗಳೂರಿನ ಅಭಿವೃದ್ದಿಗೆ ಶ್ರಮಿಸಿದ, ಕರ್ನಾಟಕ ಕಂಡ ದಿಟ್ಟ ರಾಜಕಾರಣಿ, ಬೆಂಗಳೂರಿಗೆ ಬ್ರ್ಯಾಡ್‌ ಬೆಂಗಳೂರು ಎಂಬ ಹೆಸರು ಬರಲು ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಂಗಳವಾರ (ಡಿಸೆಂಬರ್‌ 10) ಮುಂಜಾನೆ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶ್ವಾಸಕೋಸದ ಸಮಸ್ಯೆಯಿಂದ ಬಳಲುತ್ತಿದ್ದ ಅವರು 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ದಿಟ್ಟ ನಿಲುವುಗಳು ಹಾಗೂ ಆಡಳಿತಾತ್ಮಕ ನಡೆಯಿಂದ ದೇಶದ ಗಮನ ಸೆಳೆದಿದ್ದರು. ರಾಜಕೀಯದ ಜೊತೆಗೆ ಅವರಿಗೆ ಕ್ರೀಡೆಯ ಮೇಲೆ ತುಂಬಾ ಒಲವಿತ್ತು. ಟೆನ್ನಿಸ್ ಎಂದರೆ ಅವರಿಗೆ ಪಂಚಪ್ರಾಣ. ತಮ್ಮ ರಾಜಕೀಯದ ಬ್ಯುಸಿ ಸಮಯದಲ್ಲೂ ಟೆನ್ನಿಸ್‌ ಆಡುವುದನ್ನು ಅವರು ಮರೆಯುತ್ತಿರಲಿಲ್ಲ. ರಾಕೆಟ್‌ ಹಿಡಿದು, ಟೆನ್ನಿಸ್‌ ಆಡುವುದು ಹಾಗೂ ಪಂದ್ಯ ನೋಡುವುದು ಎಂದರೆ ಎಸ್‌.ಎಂ. ಕೃಷ್ಣ ಅವರಿಗೆ ಅಚ್ಚುಮೆಚ್ಚು.

ಎಸ್‌ಎಂ ಕೃಷ್ಣ ಅವರಿಗೆ ಟೆನ್ನಿಸ್‌ ಮೇಲೆ ಎಷ್ಟು ಪ್ರೀತಿ ಇತ್ತು ಎಂದರೆ ಅವರು ಸಮಯ ಸಿಕ್ಕಾಗಲೆಲ್ಲಾ ಅಂಗಳಕ್ಕೆ ಇಳಿದು ಟೆನ್ನಿಸ್‌  ಆಡಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಜೊತೆಗೆ ಅವರ ಸಂದರ್ಶನಗಳನ್ನು ನೋಡಿದರೆ ಸಾಕು ಟೆನ್ನಿಸ್‌  ಮೇಲಿನ ಪ್ರೀತಿ ಎಷ್ಟು ಎಂಬುದು ತಿಳಿಯುತ್ತದೆ.

ಬಾಲ್ಯದಿಂದಲೂ ಕ್ರೀಡೆಯ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ಎಸ್‌.ಎಂ. ಕೃಷ್ಣ ಅವರ ಆರಂಭದ ದಿನಗಳಲ್ಲಿ ಫುಟ್‌ಬಾಲ್‌, ವಾಲಿಬಾಲ್‌ ಆಡುತ್ತಿದ್ದರು. ಮಹಾರಾಜ ಕಾಲೇಜಿಗೆ ಸೇರಿದ ನಂತರ ಟೆನ್ನಿಸ್‌  ಮೇಲೆ ಪ್ರೀತಿ ಬೆಳೆಸಿಕೊಂಡರು.

ಎಸ್‌.ಎಂ. ಕೃಷ್ಣ ಟೆನ್ನಿಸ್‌ನಲ್ಲಿ  ವಿಶ್ವ ವಿಖ್ಯಾತ ಆಟಗಾರ ರೋಜರ್‌ ಫೆಡರರ್‌ ಅವರನ್ನು ತುಂಬಾ ಇಷ್ಟಪಡುತ್ತಿದ್ದರು. ವಿದೇಶದಲ್ಲಿ ವ್ಯಾಸಂಗ ಮಾಡುವ ಸಮಯದಲ್ಲಿ ವಿಂಬಲ್ಡನ್‌ ಮ್ಯಾಚ್‌ಗಳಲ್ಲಿ ರೋಜರ್‌ ಅವರ ಆಟ ನೋಡಿ ಆನಂದಿಸುತ್ತಿದ್ದರು. ಒಂದೇ ವರ್ಷದಲ್ಲಿ ನಡೆಯುವ ನಾಲ್ಕು ಗ್ರ್ಯಾಂಡ್‌ ಸ್ಲ್ಯಾಮ್‌ ಟೂರ್ನಿಗಳನ್ನು ನೋಡಿ ಕೃಷ್ಣ ಖುಷಿ ಪಟ್ಟಿದ್ದರು.

Tags:
error: Content is protected !!