Mysore
35
few clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಕಾವೇರಿ ನೀರು ಪೋಲು ಮಾಡಿದರೆ 5000 ರೂ ದಂಡ

ಬೆಂಗಳೂರು: ಈ ಬಾರಿ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ.

ಬೆಂಗಳೂರು ಜಲಮಂಡಳಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿದೆ.

ಅದರ ಜೊತೆಗೆ ನೀರಿನ ಅಭಾವ ಆಗೋದು ಡೌಟ್.‌ ಒಂದು ವೇಳೆ ನೀರಿನ ಅಭಾವ ಆದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಜಲಮಂಡಳಿ ಮುಂದಾಗಿದೆ.

ಬೆಂಗಳೂರಿನ ಕುಡಿಯುವ ನೀರನ್ನು ಒದಗಿಸುವ ಕಾವೇರಿ ನೀರು ಸದ್ಯ ಕೆಆರ್‌ಎಸ್‌ನಲ್ಲಿ 54 ಟಿಎಂಸಿ ನೀರು ಇದೆ. ಜುಲೈವರೆಗೆ ಬೆಂಗಳೂರಿಗೆ 14 ಟಿಎಂಸಿ ನೀರು ಸಾಕಾಗುತ್ತದೆ. ಆದರೆ ಇಡೀ ಬೆಂಗಳೂರಿಗೆ ಕಾವೇರಿಯ ಜೊತೆಗೆ ಬೋರ್‌ವೆಲ್‌ ನೀರು ಕೂಡ ಬಹಳ ಪ್ರಮುಖ ಪಾತ್ರವಹಿಸಿದ್ದು, ಬೋರ್‌ವೆಲ್‌ನಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದು ನಿಶ್ಚಿತ. ಕಳೆದ ವರ್ಷದಿಂದ ಜಲಮಂಡಳಿಯೇ ಸಂಪೂರ್ಣವಾಗಿ ಬೋರ್‌ವೆಲ್‌ಗಳ ನಿರ್ವಹಣೆ ಮಾಡ್ತಿದ್ದು, ಅಂತರ್ಜಲ ಕುಸಿಯದಂತೆ ಕ್ರಮ ಕೈಗೊಂಡಿದೆ.

 

 

Tags:
error: Content is protected !!