ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ತೆರೆದ ವಾಹನ ಹತ್ತಿ ಮಾಲೆ ಹಾಕಿದ್ದ ವ್ಯಕ್ತಿಯ ಸೊಂಟದಲ್ಲಿ ಗನ್ ಪತ್ತೆಯಾಗಿತ್ತು. ಇದು ಸಿಎಂ ಪ್ರಚಾರದ ವೇಳೆ ಭಾರೀ ಪ್ರಮಾಣದ ಭದ್ರತಾ ಲೋಪಕ್ಕೆ ಕಾರಣವಾಗಿತ್ತು. ಈ ಸಂಬಂಧ ಗನ್ ಬಳಸಿ ಹತ್ತಿದ್ದ ವ್ಯಕ್ತಿ ರಿಯಾಜ್ ಎಂದು ಗುರುತಿಸಲಾಗಿದ್ದು, ಪೊಲೀಸರು ಈ ಸಂಬಂಧ ವಿಚಾರಣೆ ನಡೆಸಿದ್ದರು. ಈ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.
ರಿಯಾಜ್ ಕೇವಲ ತನ್ನ ಅತ್ಮರಕ್ಷಣೆಗಾಗಿ ಲೈಸೆನ್ಸ್ ಉಳ್ಳ ಪಿಸ್ಟಲ್ ಇಟ್ಟುಕೊಂಡಿದ್ದಾನೆ, ಮೂರು ವರ್ಷಗಳ ಹಿಂದೆ ಅವನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಬಳಿಕ ಪಿಸ್ಟಲ್ ಇಟ್ಟುಕೊಳ್ಳುವ ಪರವಾನಗಿ ಪಡೆದುಕೊಂಡಿದ್ದ ಎಂದು ಸ್ಪಷ್ಟನೆ ನೀಡಿದ್ದಾರೆ.
ರಿಯಾಜ್ ಕಳೆದ 20 ವರ್ಷಗಳಿಂದ ತನಗೆ ಪರಿಚಯ. ಕೋರೋನಾ ಸಂದರ್ಭದಲ್ಲಿ ಬಹಳ ಜನರಿಗೆ ಸಹಾಯ ಮಾಡಿದ್ದಾನೆ. ಚುನಾವಣೆ ಸಮಯದಲ್ಲೂ ಗನ್ ಇಟ್ಟುಕೊಂಡು ತಿರುಗಾಡಲು ವಿಶೇಷ ಅನುಮತಿ ಪಡೆದಿದ್ದಾನೆ ಎಂದು ತಿಳಸಿದ್ದಾರೆ.





