Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಬಂದರು ಇಲಾಖೆಯ ಪರಿಶೀಲನಾ ಸಭೆ: ಅನುದಾನ ಬಿಡುಗಡೆಗೆ ಮನವಿ

ಬೆಂಗಳೂರು: ಸಾಗರಮಾಲ ಯೋಜನೆಗೆ ರಾಜ್ಯದ ಪಾಲಿನ ಹಣ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್‌ ರಾಯ್‌ ಪುರ ಅವರು ಮನವಿ ಸಲ್ಲಿಸಿದರು.

ನಗರದ ವಿಕಾಸ ಸೌಧ 2ನೇ ಮಹಡಿಯಲ್ಲಿ ನಡೆದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯಾದ ಯೋಜನೆಯಾದ ಸಾಗರಮಾಲ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಈ ಯೋಜನೆಗೆ ಅನುದಾನ ಬಿಡುಗಡೆ ಗ್ರೀನ್‌ ಸಿಗ್ನಲ್‌ ನೀಡಿದ್ದರಿಂದ ರಾಜ್ಯ ಸರ್ಕಾರ ಅದಷ್ಟು ಬೇಗ ಅನುದಾನ ಬಿಡುಗಡೆಗೊಳಿಸುವಂತೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಳ ಎಸ್‌. ವೈದ್ಯ ಅವರಿಗೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಒತ್ತಾಯಿಸಿದ್ದು, ಇದಕ್ಕೆ ಸಚಿವರು ಸಹ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

ಹೀಗಾಗಲೇ ಕರಾವಳಿ ಪ್ರದೇಶದಲ್ಲಿ ಕಡಲ ಕೊರತೆ ಉಂಟಾಗಿದ್ದು, ಮೀನುಗಾರಿಕೆ ರಸ್ತೆ, ಶಾಲಾ ಕಟ್ಟಡಗಳು, ಜನವಸತಿ ಮನೆ ಮತ್ತು ಧಾರ್ಮಿಕ ಕಟ್ಟಡ ಇತ್ಯಾದಿ ಸಾರ್ವಜನಿಕ ಆಸ್ತಿಗಳನ್ನು ಸಮುದ್ರ ಕೊರೆತಯಿಂದ ಸಂರಕ್ಷಿಸಲು ಗ್ರಾನೈಟ್‌ ಕಲ್ಲಿನ ಶಾಶತ್ವ / ತಾತ್ಕಾಲಿಕ ಸಮುದ್ರ ಕೊರೆತ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಸರಿಸುಮಾರು 15 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್ನು ಇದೇ ವೇಳೆ ಕರ್ನಾಟಕದ ಕಿರು ಬಂದರುಗಳಿಂದ ಕಬ್ಬಿಣದ ಅದಿರಿನ ರಪ್ತು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್‌ ಮಂಜುಳ ಅವರಿಗೆ ಜಯರಾಮ್‌ ರಾಯ್‌ ಪುರ ಅವರು ಮನವಿ ಸಲ್ಲಿಸಿದರು.

ತದಡಿ ಬಂದರು ಯೋಜನೆ ಮತ್ತು ತದಡಿ ಫೋರ್ಟ್‌ ಲಿಮಿಟೆಡ್‌ ಕಂಪನಿಯನ್ನು ರಾಜ್ಯ ಸರ್ಕಾರದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ವರ್ಗಾಯಿಸುವಂತೆ ಈ ಹಿಂದೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಎಂ.ಬಿ ಸಿಇಒ ಜಯರಾಮ್‌ ರಾಯ್‌ ಪುರ ಅವರು ಮನವಿ ಸಲ್ಲಿಸಲಾಯಿತ್ತು. ಇದಕ್ಕೆ ಕಾರ್ಯದರ್ಶಿ ಮತ್ತು ಸಚಿವರು ಸಕರಾತ್ಮಕವಾಗಿ ಸ್ಪಂಧಿಸಿದರು.

ಇದರ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಅನುಮೋದಿಸಲಾದ ಸಾಗರಮಾಲಾ ಯೋಜನೆಗಳಿಗೆ ಪೂರ್ವಸಿದ್ಧತಾ ಅಧ್ಯಯನ ಮತ್ತು ಸಿ.ಆರ್.ಜೆಡ್‌ ಕ್ಲಿಯರೆನ್ಸ್‌ ಯೋಜನೆಗೆ ಐದು ಕೋಟಿ ಹಣ ಬಿಡುಗಡೆಗೊಳಿಸುವಂತೆ ಕೆ.ಎಂ.ಬಿ ಸಿಇಒ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದು, ಇದಕ್ಕೆ ಸಚಿವರು ಅನುಮತಿ ನೀಡಿದರು.

ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್‌. ಮಂಜುಳ, ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ.ಸಿ.ಸ್ವಾಮಿ, ಚೀಫ್‌ ಇಂಜಿನಿಯರ್‌ ಪ್ರಮೀತ್‌, ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಟಿ.ಎಸ್‌ ಥಾರನಾಥ ರಾಥೋಡ್‌ ಸೇರಿದಂತೆ ಕಚೇರಿ ಸಿಬ್ಬಂದಿ ಇದ್ದರು.

Tags: