ಬೆಂಗಳೂರು : ಇಂದು ಅಧಿವೇಶನದಲ್ಲಿ ಟಿ೨೦ ವಿಶ್ವಕಪ್ ೨೦೨೪ ರ ಗೆಲುವಿಗೆ ಕಾರಣರಾದ ಟೀಂ ಇಂಡಿಯಾದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಗೆ ಸದನದಲ್ಲಿ ಅಭಿನಂದನಾ ಗೌರವ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಬಿಜೆಪಿ ಶಾಸಕ ಸುರೇಶ್ ಕುಮಾರ್ , ಭಾರತ ಟಿ.೨೦ ವಿಶ್ವಕಪ್ ಗೆಲುವಿನ ವೇಳೆ ಟೀಂ ಇಂಡಿಯಾದ ಮುಖ್ಯಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಸನ್ಮಾನಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸದನದ ಎಲ್ಲಾ ಸದಸ್ಯರು ಈ ಮನವಿಯನ್ನ ಸ್ವಾಗತಿಸಿದರು. ಬಳಿಕ ಈ ವಿಚಾರವಾಗಿ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿ, ಕರ್ನಾಟಕದ ಜನತೆಯ ಪರವಾಗಿ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.





