ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಪೊಲೀಸರು ತೀವ್ರವಾಗಿ ಪ್ರಶ್ನಿಸುತ್ತಿದ್ದು, ಇಂದು(ಜು.8) ಮತ್ತೆ ಎರಡನೇ ಬಾರಿ ವಿಚಾರಣೆಗಾಗಿ ಕರೆಸಿದ್ದಾರೆ.
ಪವಿತ್ರಗೌಡ ಸ್ನೇಹಿತೆ ಸಮತಾ ಹಾಗೂ ಪ್ರದೋಶ್ ಸ್ನೇಹಿತ ಕಾರ್ತಿಕ್ ಪುರೋಹಿತ್ ಅವರ ಭಾಗೀದಾರಿಕೆ ಪ್ರಕರಣದಲ್ಲಿ ಗಂಭೀರ ಸ್ವರೂಪದ್ದು, ಇಬ್ಬರಿಗೂ ಬಂಧನ ಭೀತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರಲ್ಲಿ ಒಬ್ಬಾರು ನಟ ದರ್ಶನ್ ಹಾಗೂ ಪವಿತ್ರ ಗೌಡ ಅನ್ನು ಭೇಟಿಯಾಗಲು ಜೈಲಿಗೆ ಬಂದಿದ್ದರು.
ಜೊತೆಗೆ ಇಂದು ಪವಿತ್ರ ಗೌಡ ಆಪ್ತೆ ಸಮತಾ ವಿಚಾರಣೆ ಕೂಡ ನಡೆಯಲಿದೆ. ಈಗಾಗಲೇ ಸಮತಾ ಒಂದು ಬಾರಿ ಸತತ ಮೂರು ಗಂಟೆಗಳಿಗಳ ವಿಚಾರಣೆಗೆ ಹಾಜರಾದ್ದಾರೆ. ಈಕೆ ಆರೋಪಿ ಧನರಾಜ್‍ಗೆ 3 ಸಾವಿರ ರೂಪಾಯಿ ಹಣ ಕಳುಹಿಸಿದ್ದಳು. ಇದೇ ಹಣದಲ್ಲಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿ ಮಾಡಿರುವ ಶಂಕೆ ಇದೆ.





