ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 7 ಆರೋಪಿಗಳಿಗೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಕೊಲೆ ಪ್ರಕರಣದ A1 ಆರೋಪಿ ಪವಿತ್ರ ಗೌಡ, A2 ಆರೋಪಿ ದರ್ಶನ್ ಅವರಿಗೂ ಜಾಮೀನು ದೊರೆತಿದೆ.
ಈ ಕುರಿತು ಪವಿತ್ರ ವಕೀಲರಾದ ಶಿಲ್ಪಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಕಕ್ಷಿಧಾರೆ ಪವಿತ್ರಾ ಗೌಡಗೆ ಜಾಮೀನು ಸಿಗಲು ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಪವಿತ್ರಾ ಗೌಡ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಸೆಬಾಸ್ಟಿಯನ್, ತಮ್ಮ ಕಕ್ಷಿದಾರರು ಸಿಂಗಲ್ ಪೆರೆಂಟ್ ಜೊತೆಗೆ ಆಕೆ ಒಬ್ಬ ಮಹಿಳೆ. ಈ ಪ್ರಕರಣದಲ್ಲಿ ಅವರ ಪಾತ್ರವಿಲ್ಲವೆಂದು ವಾದಿಸಿದ್ದರು. ಮುಂದುವರಿದು ಅಪಹರಣ ಅಥವಾ ಕೊಲೆ ಮಾಡುವುದಕ್ಕೆ ಕುಮ್ಮಕ್ಕು ನೀಡಿಲ್ಲ. ಹೀಗಾಗಿ ಪವಿತ್ರ ಜಾಮೀನು ನೀಡಬೇಕು ಎಂದು ತಮ್ಮ ವಾದ ಮಂಡಿಸಿದ್ದರು.
ಹೈಕೋರ್ಟ್ ಈ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ತೀರ್ಪುನ್ನು ಕಾಯ್ದಿರಿಸಿತ್ತು. ಇಂದು(ಡಿ.13) ಜಾಮೀನು ಮಂಜೂರು ಆದೇಶ ಹೊರಬಂದಿದೆ. ಆದರೆ ಕೋರ್ಟ್ ಅವಳು ಮಹಿಳೆ ಎಂಬ ಕಾರಣಕ್ಕಾಗಿ ಬೇಲ್ ನೀಡಿಲ್ಲ. ಬದಲಾಗಿ ಈ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂಬ ಕಾರಣಕ್ಕೆ ಬೇಲ್ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪವಿತ್ರಗೌಡಗೆ ಜಾಮೀನು ದೊರೆತರೂ ಇಂದು ಬಿಡುಗಡೆ ಭಾಗ್ಯ ಇಲ್ಲ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಏಳು ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿರುವ ಪವಿತ್ರ ಅವರಿಗೆ ಷರತ್ತು ಬದ್ಧ ಜಾಮೀನು ವಿಧಿಸಿದ್ದು, ಸೋಮವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಪವಿತ್ರ ಗೌಡ ಜಾಮೀನಿಗೆ ತಾಯಿಯ ಪ್ರತಿಕ್ರಿಯೆ
ಪವಿತ್ರ ಗೌಡಗೆ ಜಾಮೀನು ಸಿಕ್ಕಿರುವ ಸಂಬಂಧ, ಅವರ ತಾಯಿ ಮಾತನಾಡಿ ಮಗಳಿಗೆ ಜಾಮೀನು ಸಿಕ್ಕಿರುವುದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.