ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ನಟ ದರ್ಶನ್ ಮೈಸೂರಿಗೆ ಹಾಗೂ ಪವಿತ್ರಾ ಗೌಡ ಅವರು ದೆಹಲಿಗೆ ತೆರಳಲು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಇವರಿಬ್ಬರಿಗೂ ಕೆಲ ದಿನಗಳ ಕಾಲ ತೆರಳಲು ಅನುಮತಿ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಜನವರಿ.10) 57ನೇ ಸಿಸಿಚ್ ನ್ಯಾಯಾಲಯಕ್ಕೆ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಡಿ ಗ್ಯಾಂಗ್ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ದರ್ಶನ್ ಮೈಸೂರಿಗೆ ತೆರಳಲು ಹಾಗೂ ಪವಿತ್ರಾ ಗೌಡ ಹೊರ ರಾಜ್ಯದ ದೇವಾಲಯ ಮತ್ತು ಆರ್.ಆರ್.ನಗರದಲ್ಲಿರುವ ತಮ್ಮ ರೆಡ್ ಕಾರ್ಪೆಟ್ ಶೋ ರೂಂಗೆ ವ್ಯವಹಾರದ ಸಂಬಂಧ ದೆಹಲಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಯನ್ನು ನಡೆಸಿದ 57ನೇ ಸಿಸಿಎಚ್‌ನ ನ್ಯಾಯಪೀಠವೂ ಆರೋಪಿ ದರ್ಶನ್‌ಗೆ ಜನವರಿ.12 ರಿಂದ 17ರವರೆಗೆ ಮೈಸೂರಿನಲ್ಲಿ ವಾಸ್ತವ್ಯದಲ್ಲಿರಲು ಅನುಮತಿ ನೀಡಿದೆ. ಅಲ್ಲದೇ ಪವಿತ್ರಾ ಗೌಡ ಅವರಿಗೆ ಒಂದು ತಿಂಗಳ ಕಾಲ ದೆಹಲಿ ಮತ್ತು ಮುಂಬೈ ಸೇರಿದಂತೆ ಹೊರ ರಾಜ್ಯದ ದೇವಾಲಯಗಳಿಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಆದೇಶ ಹೊರಡಿಸಿದೆ.





