ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬಚಾವಾಗಲೂ ಹಂತಕರಿಗೆ ನೀಡಲು ರೆಸ್ಟೋರೆಂಟ್ ವೊಂದರಲ್ಲಿ ಇರಿಸಿದ್ದ 30 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬಂಧಿತನಾಗಿರುವ ವಿನಯ್ ಮಾಲೀಕತ್ವದ ಆರ್.ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ ಹಂತಕರಿಗೆ ನೀಡಲು ಇಟ್ಟಿದ್ದ ಈ ಹಣವನ್ನು ಶುಕ್ರವಾರ(ಜೂ.14) ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಹಣವನ್ನು ರೇಣುಕಾಸ್ವಾಮಿ ಹತ್ಯೆ ಆರೋಪವನ್ನು ಹೊರುವ ಯುವಕರಿಗೆ ನೀಡಲು ಇರಿಸಿದ್ದು ಎನ್ನಲಾಗಿದೆ. ನಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡು ಬಂದಿದ್ದ ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿಗೆ ಹಾಗೂ ನಿಖಿಲ್ ನಾಯಕ್‌ಗೆ ತಲಾ 5 ಲಕ್ಷ ನೀಡಲು ಹಣವನ್ನು ಇಡಲಾಗಿತ್ತು.