Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕನ್ನಡ ಕಿರುತೆರೆಯ ಖ್ಯಾತ ನಟ ಶ್ರೀಧರ್‌ ನಾಯಕ್‌ ನಿಧನ

Sridhar Nayak

ಬೆಂಗಳೂರು: ಕನ್ನಡ ಕಿರುತೆರೆ ಹಾಗೂ ಚಲನಚಿತ್ರ ನಟ ಶ್ರೀಧರ್‌ ನಾಯಕ್‌(47) ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್‌ ನಾಯಕ್‌ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಧರ್‌ ನಾಯಕ್‌ ನಿಧನರಾಗಿದ್ದಾರೆ.

ಗುರುತೇ ಸಿಗದಷ್ಟು ಬದಲಾಗಿರುವ ಅವರು, ಬೆಡ್‌ ಮೇಲೆ ಮಲಗಿದ್ದನ್ನು ನೋಡಿ ಹಲವರಿಗೆ ಶಾಕ್‌ ಆಗಿತ್ತು. ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಮ್ಯಾಕ್ಸ್‌ ಚಿತ್ರದಲ್ಲೂ ನಟಿಸಿದ್ದರು.

ಶ್ರೀಧರ್‌ ನಾಯಕ್‌ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಹಲವು ನಟ-ನಟಿಯರು ಶ್ರೀಧರ್‌ ನಿಧನಕ್ಕೆ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

Tags:
error: Content is protected !!