Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಧಿವೇಶನದ ವೇಳೆ ಶಾಸಕರ ವಿಶ್ರಾಂತಿಗೆ ಪ್ರತ್ಯೇಕ ಆಸನ ವ್ಯವಸ್ಥೆ

ಬೆಂಗಳೂರು : ಅಧಿವೇಶನದ ವೇಳೆ ಮಧ್ಯಾಹ್ನದ ಕಿರು ನಿದ್ರೆಗಾಗಿ ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನದ ನಡೆದ ಸಮಯದಲ್ಲಿ ಮಧ್ಯಾಹ್ನ ಊಟದ ನಂತರ ಶಾಸಕರ ಹಾಜರಾತಿ ಕಡಿಮೆ ಆಗುತ್ತಿದೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್‌ ಯು.ಟಿ ಖಾದರ್‌ ಹೊಸ ಐಡಿಯಾ ಮಾಡಿದ್ದಾರೆ.

ಲಾಂಜ್‌ ನಲ್ಲಿ ಕಿರು ನಿದ್ರೆಗಾಗಿ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕನೇ ದಿನದ ಅಧಿವೇಶನದಲ್ಲಿ ಸೀಕರ್‌ ಈ ಬಗ್ಗೆ ಪ್ರಸ್ತಾಪಿಸಿದರು. ವಿಧಾನಸಭೆ ಸದಸ್ಯರಿಗಾಗಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಉತ್ತಮ ಊಟದ ವ್ಯವಸ್ಥೆ ಮಾಡಲಾಗಿದೆ. ಊಟವಾದ ಮೇಲೆ ಕೆಲ ಶಾಸಕರು ಕಿರು ನಿದ್ದೆ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬರುವುದಿಲ್ಲ. ಇದನ್ನ ತಪ್ಪಿಸಲು ಶಾಸಕರ ಕಿರು ನಿದ್ರೆಗಾಗಿ ಪ್ರಾಯೋಗಿಕವಾಗಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಒಂದು ರಿಕ್ಲೈನರ್‌ ಕುರ್ಚಿ ಹಾಕಲಾಗಿದೆ. ಶಾಸಕರು ಅದರೆ ಮೇಲೆ ನಿದ್ರೆ ಮಾಡಿ ಸದನಕ್ಕೆ ಬರಬಹುದು. ಆ ರಿಕ್ಲೈನರ್‌ ಕುರ್ಚಿ ನಿಮಗೆ ಸರಿ ಎನಿಸಿದರೆ ಮುಂದಿನ ಅಧಿವೇಶನದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತೇನೆ ಎಂದು ಸದಸ್ಯರಿಗೆ ಹೇಳಿದರು.

ಇದೇ ವೇಳೆ ಶಾಸಕರು ಪಿಎಗಳನ್ನ ವಿಧಾನಸಭೆ ಲಾಂಜ್ ಗೆ ಕರೆದುಕೊಂಡು ಬರಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್‌ ಗಳ ಜೊತೆ ವಾಗ್ವಾದ ಮಾಡಬೇಡಿ ಎಂದು ಸೂಚನೆ ನೀಡಿದರು.

Tags: