Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಕಾಲ್ತುಳಿತಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಆರ್‌ಸಿಬಿ

rcb

ಬೆಂಗಳೂರು: ರಾಜ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ರಾಯಲ್‌ ಚಾಲೆಂಜ್‌ರ್ಸ  ತಂಡ ಸಂತ್ರಸ್ತ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.

ಸಂತ್ರಸ್ತ ಕುಟುಂಬಗಳಿಗೆ ನಾವು ನೀಡುತ್ತಿರುವುದು ಆರ್ಥಿಕ ನೆರವಲ್ಲ. ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ನಾವು ಕೊಡುತ್ತಿರುವುದು ಕಾಳಜಿ ಮತ್ತು ಸಹಾನುಭೂತಿಯ ಫಲ ಎಂದು ಆರ್‌ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘೋಷಣೆ ಮಾಡಿದೆ.

ಕಳೆದ ಜೂ.4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಕೇಳಿ ನಮ್ಮ ಹೃದಯಗಳು ಛಿದ್ರವಾಗಿಸಿವೆ. ಈ ಘಟನೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಲು ನಮ್ಮಲ್ಲಿ ಪದಗಳಿಲ್ಲ. ನಾವು ನೀಡುತ್ತಿರುವ ಪರಿಹಾರ ನೊಂದ ಕುಟುಂಬವನ್ನು ಪರಿಹರಿಸುತ್ತದೆ ಎಂಬ ಭಾವನೆಯೂ ಇಲ್ಲ. ಆದರೆ ನಿಮ್ಮ ನೋವಿನಲ್ಲಿ ನಾವಿದ್ದೇವೆ. ನಿಮ್ಮ ಧ್ವನಿಗೆ ನಾವು ದನಿಯಾಗುತ್ತೇವೆ ಎಂದು ಹೇಳಿದೆ.

Tags:
error: Content is protected !!