Mysore
28
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಡೆಂಗ್ಯೂ ಜ್ವರ ಆಯ್ತು, ಇದೀಗ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

ಹಾವೇರಿ : ರಾಜ್ಯದಲ್ಲಿ ಒಂದೆಡೆ ಡೆಂಗ್ಯೂ ಜ್ವರ ರುದ್ರನರ್ತನ ತಾಳುತ್ತಿದ್ದು, ಡೆಂಗ್ಯೂ ಇದ್ದಾಗಿ ಜನ ನಲುಗಿ ಹೋಗುತ್ತಿದ್ದಾರೆ. ಮತ್ತೊಂದು ಕಡೆ ಹಾವೇರಿಯಲ್ಲಿ ಇಲಿ ಜ್ವರ ಕಂಡುಬಂದಿದೆ.

ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ೧೨ ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ.  ಕಳೆದ ೧೫ ದಿನಗಳಿಂದ ಜ್ವರದಿಂದ ಬಾಲಕ ಬಳಲುತ್ತಿದ್ದ. ದಿನ ಬಿಟ್ಟು ದಿನ ಜ್ವರ ಬರುತ್ತಿದ್ದರಿಂದ ಜಾಂಡೀಸ್‌ ಇರಬಹುದು ಎಂದು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿದ್ದಾರೆ. ಆದರೆ ವರದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಬಾಲಕನನ್ನ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Tags:
error: Content is protected !!